Advertisement

ಯುವಕರಿಗೆ ಸ್ಫೂರ್ತಿ;ಭಾರತದ ಮೊದಲ ಮತದಾರರನಿಂದ ಮತದಾನ

09:39 AM May 20, 2019 | Team Udayavani |

ಶಿಮ್ಲಾ: ಭಾರತದ ಮೊದಲ ಮತದಾರ ಎಂಬ ಖ್ಯಾತಿಗೆ ಪಾತ್ರರಾಗಿರುವಹಿಮಾಚಲಪ್ರದೇಶದ 102 ರ ಹರೆಯದ ಅಜ್ಜ ಶ್ಯಾಮ್‌ ಸರನ್‌ ನೇಗಿ ಅವರು ಭಾನುವಾರ ತಮ್ಮ ಹಕ್ಕು ಚಲಾಯಸಿದ್ದಾರೆ.

Advertisement

ಖುಷಿಯಿಂದ ಮಾಂಡಿಯ ಕಲ್ಪಾ ಮತಗಟ್ಟೆಗೆ ಆಗಮಿಸಿದ ನೇಗಿ ಅವರು ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡ ಸಂಭ್ರಮದಲ್ಲಿ ಮನೆಗೆ ಮರಳಿದರು.

ನೇಗಿ ಅವರು ಬುಡಕಟ್ಟು ಜಿಲ್ಲೆಯಾಗಿರುವ ಕಿನೌ°ರ್‌ ನಿವಾಸಿ. 1917 ಜುಲೈ 1 ರಂದು ಜನಿಸಿದ್ದ ಇವರು 1952 ರ ಫೆಬ್ರವರಿ ನಡೆದ ಮೊದಲ ಚುನಾವಣೆಯಲ್ಲಿ ಮತದಾನ ಮಾಡಿದ್ದರು.

ಶಿಕ್ಷಕರಾಗಿದ್ದ ನೇಗಿ ಅವರು ಚುನಾವಣಾ ಕರ್ತವ್ಯಕ್ಕೆ ತೆರಳಬೇಕಾಗಿತ್ತು, ಹೀಗಾಗಿ ಅವರು ಬೆಳಗ್ಗೆ 7 ಗಂಟೆಗೆ ತೆರಳಿ ಹಕ್ಕು ಚಲಾಯಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next