ಕಂಪಾಲಾ(ಉಗಾಂಡ): ತನ್ನ ಬೃಹತ್ ಕುಟುಂಬದಿಂದಲೇ ಹೆಸರು ಗಳಿಸಿರುವ ಉಗಾಂಡ ಮೂಲದ ರೈತ ಕೊನೆಗೂ ತನ್ನ ಕುಟುಂಬದ ಜನಸಂಖ್ಯೆ ಹೆಚ್ಚಿಸುವುದನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.
ಬಹುಪತ್ನಿತ್ವ ಪದ್ದತಿ ಕಾನೂನು ಬದ್ಧವಾಗಿರುವ ಉಗಾಂಡದಲ್ಲಿ ಮೂಸಾ ಹಸಹ್ಯ ಎಂಬ ರೈತನೊಬ್ಬ 12 ಮಹಿಳೆಯರನ್ನು ಮದುವೆಯಾಗಿದ್ದಾನೆ. ಈ 12 ಮಹಿಳೆಯರು ಕೂಡ ಜೊತೆಯಾಗಿಯೇ ಇದ್ದಾರೆ. ಮೂಸಾ ಹಸಹ್ಯ ಅವರಿಗೆ ಬರೋಬ್ಬರಿ 102 ಮಕ್ಕಳಿದ್ದಾರೆ. 568 ಮೊಮ್ಮಕ್ಕಳಿದ್ದಾರೆ.
ಬೃಹತ್ ಕುಟುಂಬವನ್ನು ಹೊಂದಿರುವ ಮೂಸಾ ಹಸಹ್ಯ ಇನ್ಮುಂದೆ ತನ್ನ ಕುಟುಂಬದ ಸಂಖ್ಯೆಯನ್ನು ಬೆಳೆಸುವುದಿಲ್ಲ ಎಂದಿದ್ದಾನೆ.
ಏರುತ್ತಿರುವ ಕುಟುಂಬದ ಜನಸಂಖ್ಯೆಯಿಂದ ನನ್ನ ಆದಾಯವು ದಿನ ಕಳೆದಂತೆ ಕಡಿಮೆ ಆಗುತ್ತಿದೆ. ಒಂದಾಂದ ಮೇಲೆ ಒಂದು ಮಹಿಳೆಯರನ್ನು ನಾನು ಮದುವೆಯಾಗುತ್ತಾ ಹೋದೆ. ಒಂದು ಮಹಿಳೆಯೊಂದಿಗೆ ಹೇಗೆ ತೃಪ್ತಿಯಾಗಿರಲು ಸಾಧ್ಯ. ನಾನು ನನ್ನ ಪತ್ನಿಯರಿಗೆ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೂಸಾ ಹಸಹ್ಯ ಅವರ ಪತ್ನಿ ಜುಲೈಕಾ ಅವರಿಗೆ 11 ಮಕ್ಕಳಿವೆ. ಅವರ ಹಿರಿಯ ಮಗ ಅವರ ಕಿರಿಯ ಹೆಂಡತಿಗಿಂತ 21 ವರ್ಷ ದೊಡ್ಡವ. ಮೂಸಾ ಅವರಿಗೆ 6 ರಿಂದ 51 ವರ್ಷದ ಮಕ್ಕಳಿದ್ದಾರೆ. ಮೂಸಾ ಹಸಹ್ಯ ಕುಟುಂಬ ಉಗಾಂಡಾದ ಲುಸಾಕಾದಲ್ಲಿ ವಾಸಿಸುತ್ತಿದ್ದು, ಇಲ್ಲಿ ಬಹುಪತ್ನಿತ್ವ ಕಾನೂನುಬದ್ಧವಾಗಿದೆ.