Advertisement

ಕೋವಿಡ್‌ -19 ಗೆದ್ದ ಇಟಲಿಯ ಶತಾಯುಷಿ

09:31 AM Mar 29, 2020 | Sriram |

ಮಿಸ್ಟರ್‌ ಪಿ ಇಂದು ಜಗತ್ತಿನಲ್ಲೆ ಕೋವಿಡ್‌ 19 ಸಮರ ಗೆದ್ದ ಅತಿ ಹಿರಿಯ ವ್ಯಕ್ತಿ. ಸಾವಿನ ಮನೆಗೆ ಹೋಗಿ ಬದುಕು ಗೆದ್ದವನ ಕಥೆ ಈಗ ಎಲ್ಲರಿಗೂ ಭರವಸೆಯ ಬೆಳ್ಳಿರೇಖೆ.

Advertisement

ರೋಮ್‌: ಕೋವಿಡ್‌ 19 ದಾಳಿಗೆ ತತ್ತರಿಸಿರುವ ಇಟಲಿಯಿಂದ ಈಗ ಭರವಸೆಯ ಸುದ್ದಿಯೊಂದು ಕೇಳಿಬಂದಿದೆ. ಕೋವಿಡ್‌ 19 ವೃದ್ಧರಿಗೆ ಮಾರಕ ಎಂಬ ಮಾತಿನ ನಡುವೆ ಇಲ್ಲಿನ ಶತಾಯುಷಿಯೊಬ್ಬರು ಅದರೆದುರು ದಿಗ್ವಿಜಯ ಸಾಧಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ 101 ವರ್ಷದ “ಮಿ| ಪಿ’ ಅವರು ಮಾರಣಾಂತಿಕ ಕೋವಿಡ್‌-19 ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯರಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಕಡಿಮೆ ಇರುವ ಕಾರಣಕ್ಕೆ ಈ ಅಜ್ಜ ಮತ್ತೆ ಮನೆಗೆ ಬರುವುದಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅಲ್ಲದೆ ಈ ರೋಗಕ್ಕೆ ಔಷಧವೂ ಇಲ್ಲದ ಕಾರಣ 80 ವರ್ಷ ಮೇಲ್ಪಟ್ಟವರನ್ನು ಹಲವು ರಾಷ್ಟ್ರಗಳು ಆಸ್ಪತ್ರೆಗೆ ಸೇರಿಸಿಕೊಳ್ಳುವ ಗೋಜಿಗೇ ಹೋಗಿಲ್ಲ. ಅಂಥದ್ದರಲ್ಲಿ ಇಟಲಿಯ ಆಸ್ಪತ್ರೆಯಲ್ಲಿ ಹಾಸಿಗೆ ಪಡೆದ ಅಜ್ಜನೀಗ ಕೋವಿಡ್‌ 19 ಸಮರ ಗೆದ್ದಿದ್ದಾರೆ.

“ಮಿಸ್ಟರ್‌ ಪಿ’ಯವರು 1919ರಲ್ಲಿ ಜನಿಸಿದ್ದರು. ಪ್ರತಿದಿನ ಸಾವಿನ ಸುದ್ದಿಗಳನ್ನೇ ಪ್ರಸಾರ ಮಾಡುತ್ತಿದ್ದ ಅಲ್ಲಿನ ಮಾಧ್ಯಮಗಳು ಇಂದು ಈ ಅಜ್ಜ ಕೋವಿಡ್‌ 19 ಗೆದ್ದ ಸಂಭ್ರಮ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದೇ ವಿಶೇಷ.

80 ಬೇಕಾಗಿಲ್ಲ, ನೂರು ಬೇಕು !
ಆಸ್ಪತ್ರೆಯಲ್ಲಿ 80 ವರ್ಷ ಮೇಲ್ಪಟ್ಟ ಸೋಂಕುಪೀಡಿತ ರಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ. ಆದರೆ ಇವರು ಶತಾಯುಷಿ ಯಾಗಿದ್ದರಿಂದ ವಿಶೇಷ ಮುತುವರ್ಜಿಯಿಂದ ಚಿಕಿತ್ಸೆ ನೀಡಲಾಯಿತಂತೆ. ಈಗ ಅಜ್ಜ ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಿ ರಿಮಿನಿ ನಗರದಲ್ಲಿರುವ ತಮ್ಮ ಮನೆಗೆ ವಾಪಸಾಗಿದ್ದಾರೆ.

Advertisement

ಶತಾಯುಷಿ ಹೆಚ್ಚಿಸಿದ ಆತ್ಮವಿಶ್ವಾಸ
101 ವರ್ಷದ ವೃದ್ಧರೊಬ್ಬರು ಪೂರ್ಣವಾಗಿ ಗುಣಮುಖರಾದ ಸುದ್ದಿ ಕೋವಿಡ್‌ 19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುವವರಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ. ಅವರ ಮನೆಯವರಿಗೂ ಹೊಸ ಚೈತನ್ಯ ದೊರೆತಂತಾಗಿದೆ. ವೈದ್ಯಕೀಯ ಲೋಕಕ್ಕೆ ಮತ್ತು ಜಗತ್ತಿಗೆ ಪವಾಡದಂತೆ ಕಂಡು ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next