ಲಾಹೋರ್: ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 4 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ಥಾನ 2-1ರಿಂದ ಸರಣಿ ವಶಪಡಿಸಿಕೊಂಡಿದೆ.
ಇದು ಪಾಕಿಸ್ಥಾನದ 100ನೇ ಟಿ20 ಗೆಲುವು. ಇದರೊಂದಿಗೆ ಪಾಕ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಗೆಲುವು ಸಾಧಿಸಿದ ವಿಶ್ವದ ಮೊದಲ ತಂಡವೆನಿಸಿತು. ಟೆಸ್ಟ್‌ನಲ್ಲಿ 140, ಏಕದಿನದಲ್ಲಿ 488 ಪಂದ್ಯಗಳನ್ನು ಗೆದ್ದಿದೆ.
ರವಿವಾರ ರಾತ್ರಿ “ಗದ್ದಾಫಿ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 164 ರನ್ ಗಳಿಸಿದರೆ, ಪಾಕಿಸ್ಥಾನ 18.4 ಓವರ್‌ಗಳಲ್ಲಿ 6 ವಿಕೆಟಿಗೆ 169 ರನ್ ಬಾರಿಸಿ ಗೆದ್ದು ಬಂತು. ಪಾಕ್ ಮೊದಲ ಪಂದ್ಯವನ್ನು 3 ವಿಕೆಟ್‌ಗಳಿಂದ ಜಯಿಸಿತ್ತು. ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಸಮಬಲಕ್ಕೆ ತಂದಿತ್ತು.
ಇದನ್ನೂ ಓದಿ:ಆಸ್ಟ್ರೇಲಿಯನ್ ಓಪನ್ : ನಡಾಲ್, ಬಾರ್ಟಿ; ಕ್ವಾರ್ಟರ್ ಫೈನಲ್ ಪಾರ್ಟಿ
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-8 ವಿಕೆಟಿಗೆ 164 (ಮಿಲ್ಲರ್ ಔಟಾಗದೆ 85, ಮಾಲನ್ 27, ಜಾಹಿದ್ 40ಕ್ಕೆ 3, ನವಾಜ್ 13ಕ್ಕೆ 2, ಹಸನ್ ಅಲಿ 29ಕ್ಕೆ 2). ಪಾಕಿಸ್ಥಾನ-18.4 ಓವರ್‌ಗಳಲ್ಲಿ 6 ವಿಕೆಟಿಗೆ 169 (ಆಜಂ 44, ರಿಜ್ವಾನ್ 42, ಹಸನ್ ಅಲಿ ಔಟಾಗದೆ 20, ಶಂಸಿ 25ಕ್ಕೆ 4). ಪಂದ್ಯಶ್ರೇಷ್ಠ: ಮೊಹಮ್ಮದ್ ನವಾಜ್.
ಸರಣಿಶ್ರೇಷ್ಠ: ಮೊಹಮ್ಮದ್ ರಿಜ್ವಾನ್.