ಉಡುಪಿ: ಮಾನಸಿಕ ಆರೋಗ್ಯ ಜಾಗೃತಿಯ ಧ್ಯೇಯದೊಂದಿಗೆ ಮಣಿಪಾಲದ ಮಾಹೆ ವಿ.ವಿ. ಹಾಗೂ ಜಿಲ್ಲಾ ಅಮೆಚೂÂರ್ ಆ್ಯತ್ಲೆಟಿಕ್ ಅಸೋಸಿಯೇಶನ್ ಸಹಯೋಗದಲ್ಲಿ ಮಣಿಪಾಲದಲ್ಲಿ ಆಯೋಜಿಸಿದ್ದ ಮಣಿಪಾಲ ಮ್ಯಾರಥಾನ್‌ನಲ್ಲಿ 14 ಮಂದಿ ವಿದೇಶಿ ಪ್ರಜೆಗಳು ಸೇರಿದಂತೆ 10,000ಕ್ಕೂ ಮಿಕ್ಕಿ ಕ್ರೀಡಾಪಟುಗಳು ಭಾಗವಹಿಸಿದ್ದರು.
ವಿ.ವಿ. ಆವರಣದಲ್ಲಿ ಐಸಿಐಸಿಐ ಬ್ಯಾಂಕಿನ ದಕ್ಷಿಣ ರಿಟೇಲ್ ಹೆಡ್ ವಿರಾಳ್ ರೂಪಾನಿ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಮಣಿಪಾಲದಿಂದ ಆರಂಭಗೊಂಡ ಓಟ ಪೆರಂಪಳ್ಳಿ, ಅಂಬಾಗಿಲು, ರಾ.ಹೆ., ಕರಾವಳಿ ಬೈಪಾಸ್, ಬನ್ನಂಜೆ ರಸ್ತೆ, ಬಿಗ್ ಬಜಾರ್, ಕೆಎಂ ಮಾರ್ಗ, ಕಲ್ಸಂಕ ಮಾರ್ಗವಾಗಿ ಮಣಿಪಾಲದವರೆಗೆ ನಡೆಯಿತು.
ಆರಂಭದಲ್ಲಿ ಕಂಡು ಬಂದ ಓಟಗಾರರ ಸಂಖ್ಯೆ ಅಂತಿಮ ಹಂತದಲ್ಲಿ ಕ್ಷೀಣಿಸಿತು. ಓಟಗಾರರಲ್ಲಿ 7 ವರ್ಷದಿಂದ ಹಿಡಿದು 60 ವರ್ಷ ವಯಸ್ಸಿನವರೆಗಿನವರೆಗೂ ಇದ್ದರು.
ಕೆಎಂಸಿ ಗ್ರೀನ್ಸ್‌ನಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಶಾಸಕ ಕೆ. ರಘುಪತಿ ಭಟ್, ಎಸ್ಪಿ ಲಕ್ಷ್ಮಣ ಬ. ನಿಂಬರಗಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ನೌಕಾಪಡೆಯ ಕಮಾಂಡರ್ ಅಭಿಲಾಷ ಟಾಮಿ, ಅದಾನಿಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಭಾಸ್ಕರ್ ಹಂದೆ ವಿಜೇತರಿಗೆ ಮತ್ತು ಸ್ಪರ್ಧಾಳುಗಳಿಗೆ
ಶುಭ ಹಾರೈಸಿದರು.
ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್, ಸಹಕುಲಪತಿಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪೂರ್ಣಿಮಾ ಬಾಳಿಗಾ, ಕುಲಸಚಿವ ಡಾ| ನಾರಾಯಣ ಸಭಾಹಿತ್, ಕರ್ನಾಟಕ ಆ್ಯತ್ಲೆಟಿಕ್ ಅಸೋಸಿಯೇಶನ್ ಉಪಾಧ್ಯಕ್ಷ ಎಚ್.ಟಿ. ಮಹಾದೇವ, ಯುನೈಟೆಡ್ ಟೊಯೋಟಾ ನಿರ್ದೇಶಕ ವರುಣ್ ರಾವ್, ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಸಂಘಟನ ಸಮಿತಿ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಪ್ರ.ಕಾರ್ಯದರ್ಶಿ ದಿನೇಶ್ ಡಿ. ಕೋಟ್ಯಾನ್, ಖಜಾಂಚಿ ಡಾ| ದೀಪಕ್‌ರಾಮ್ ಬಾಯರಿ, ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.
ಬಹುಮಾನ ವಿಜೇತರು 21.1 ಕಿ.ಮೀ. ಮುಕ್ತ ವಿಭಾಗದ ಮಹಿಳೆಯರ ಹಾಫ್ ಮ್ಯಾರಥಾನ್
1. ಅರ್ಚನಾ, 2. ಶಾಲಿನಿ, 3. ಪ್ರಿಯಾಂಕಾ, 4. ಸೌಜನ್ಯಾ, 5. ಅನಿತಾ, 6. ಆಸಾ, 7. ತೇಜಾಬೀನ.
ಪುರುಷರ ವಿಭಾಗ
1. ಇಬ್ರಾಹಿಂ, 2. ಪರಸಪ್ಪ, 3. ಐಸಾಕ್, 4. ಪ್ರವೇಶ್, 5. ಲಿಂಗರಾಜ್, 6. ಮಣಿಕಂಠ, 7. ಶಾಶಂಕ್ ಪಾಲ್.
ಮಾಹೆ ವಿದ್ಯಾರ್ಥಿಗಳು
ಪುರುಷರ ವಿಭಾಗ
1. ಬಿನು ಪೀಟರ್, 2. ಮಹಾಕುಟೇಶ್ವರ್, 3. ಸುದೀಪ್ ಕುಮಾರ್, 4. ಮುಕುಲ್, 5. ಇಶಾನ್ ತ್ರಿವೇದಿ.
ಮಹಿಳೆಯರ ವಿಭಾಗ
1. ಎನಿರ್ಕಸ್, 2. ಕ್ರಿತಿನಾ, 3. ಚಿತ್ರಾಲಿ, 4. ಜೋಶ್ನಿ, 5. ಅಂಕಿತಾ.