ಪಣಜಿ: ಬರುವ ನವೆಂಬರ್ ತಿಂಗಳ ವರೆಗೆ ಗೋವಾ ರಾಜ್ಯ ಸರ್ಕಾರವು ರಾಜ್ಯದ 10,000 ಜನರಿಗೆ ನೌಕರಿ ನೀಡಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಭರವಸೆ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಿಂದ ರಾಜ್ಯದ ಎಲ್ಲ ಮತ ಕ್ಷೇತ್ರಗಳಲ್ಲಿಯೂ ರಾಜಕೀಯ ಸರ್ವೆ ಆರಂಭಗೊಂಡಿದೆ. ಯಾವ ಅಭ್ಯರ್ಥಿಗಳು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆಯೋ ಅಂತವರಿಗೆ ಮಾತ್ರ ಟಿಕೇಟ್ ನೀಡಲಾಗುವುದು. ಯಾರು ಚುನಾವಣೆಯಲ್ಲಿ ಆಯ್ಕೆಯಾಗುವುದಿಲ್ಲ ಎಂದು ಸರ್ವೆಯಲ್ಲಿ ಕಂಡುಬರುತ್ತದೆಯೋ ಅಂತವರಿಗೆ ಬಿಜೆಪಿಯಿಂದ ಚುನಾವಣೆಗೆ ಸ್ಫರ್ಧಿಸಲು ಟಿಕೇಟ್ ಲಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.
10,000 ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ನಾನು ಈ ಹಿಂದೆ ನೀಡಿದ್ದೆ. ಇದುವರೆಗೂ ಸುಮಾರು 6,000 ನೌಕರಿಗಾಗಿ ಜಾಹೀರಾತು ನೀಡಲಾಗಿದೆ. ಮುಂಬರುವ ನವೆಂಬರ್ ತಿಂಗಳ ಒಳಗೆ ಇನ್ನೂ 4,000 ನೌಕರಿಗೆ ಜಾಹೀರಾತು ನೀಡಲಾಗುವುದು.
ಗೋವಾ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾಗುವ ಮುನ್ನ ಈ ಮೂಲಕ 10,000 ಜನರಿಗೆ ನೌಕರಿ ಸಿಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಇದನ್ನೂ ಓದಿ :ಗ್ರಾ.ಪಂ.ಚುನಾವಣೆ ಧ್ವೇಷಕ್ಕೆ ಸುಪಾರಿ ಹತ್ಯೆ :ಐವರ ಬಂಧನ ;ಅಪಘಾತ ಎಂದು ಬಿಂಬಿಸಿದ್ದ ಪ್ರಕರಣ