ಹಾವೇರಿ: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಒಂದೂವರೆ ತಿಂಗಳಲ್ಲಿ ಶೇ.100ರಷ್ಟು ಪ್ರಗತಿ ಸಾ ಧಿಸಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಮಾದರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವಾಲಯ ಶ್ಲಾಘಿಸಿದ್ದು, ದೇಶಾದ್ಯಂತ ಇದರ ವಿಸ್ತರಣೆಗೆ ಚಿಂತನೆ ನಡೆಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಶೇ.46ರಷ್ಟು ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿದ್ದಾರೆ. ಇನ್ನುಳಿದ ಸಮೀಕ್ಷೆಯನ್ನು ಪಿಆರ್‌ಗಳ ಮೂಲಕ ನಡೆಸಲಾಗಿದೆ. ಈ ಸಮೀಕ್ಷೆಯಿಂದ ರಾಜ್ಯದಲ್ಲಿ ರೈತರು ಯಾವ ಬೆಳೆಯನ್ನು ಎಷ್ಟು ಪ್ರಮಾಣದಲ್ಲಿ ಬೆಳೆದಿದ್ದಾರೆ ಎಂಬನಿಖರ ಮಾಹಿತಿ ಸಿಗಲಿದೆ. ಈ ವರ್ಷ ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಈ ಸಮೀಕ್ಷೆಯಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಆಗುವ ಬೆಳೆಹಾನಿ ಹಾಗೂ ಬೆಳೆವಿಮೆ ನೀಡಲು ಅನುಕೂಲವಾಗಲಿದೆ ಎಂದರು.
ಭೂಮಿ ತಂತ್ರಾಂಶದ ಪ್ರಕಾರ ರಾಜ್ಯದಲ್ಲಿಒಟ್ಟು 2,10,26,991 ರೈತರ ತಾಕುಗಳನ್ನುಸಮೀಕ್ಷೆ ಮಾಡಬೇಕಾಗಿತ್ತು. ಅ.25ಕ್ಕೆ ಎಲ್ಲವನ್ನುಪೂರ್ಣಗೊಳಿಸಲಾಗಿದೆ ಎಂದರು.
2019ನೇ ಸಾಲಿನ ಮುಂಗಾರು ಬೆಳೆವಿಮೆ 2,71,670 ಫಲಾನುಭವಿಗಳಿಗೆ 263.24 ಕೋಟಿ ವಿಮೆಯನ್ನು ಬೆಳೆ ಸಮೀಕ್ಷೆ ಮಾಹಿತಿಯೊಂದಿಗೆ ತಾಳೆಯಾದರೈತ ಫಲಾನುಭವಿಗಳಿಗೆ ಇತ್ಯರ್ಥಪಡಿಸಲಾಗಿದೆ. ಉಳಿದ ಫಲಾನುಭವಿಗಳಿಗೆ ಶೀಘ್ರದಲ್ಲೇ ಇತ್ಯರ್ಥಪಡಿಸಲಾಗುವುದು. 2017-18, 2018-19ನೇ ಸಾಲಿನಲ್ಲಿ ಬ್ಯಾಂಕ್‌ನಿಂದ ಹಾಗೂ ರೈತರ ಕೆಲವು ತಾಂತ್ರಿಕ ತೊಡಕಿನಿಂದ ಇತ್ಯರ್ಥವಾಗದ 11,251 ಫಲಾನುಭವಿಗಳಿಗೆ ವಿಮಾ ಪರಿಹಾರವಾಗಿ 14.95 ಕೋಟಿ ರೂ. ಇತ್ಯರ್ಥಪಡಿಸಲಾಗಿದೆ. 2015ರ ಮುಂಗಾರು ಹಂಗಾಮಿನ ಜಿಲ್ಲೆಯ ಮೊಟೆಬೆನ್ನೂರು ಗ್ರಾಮದ ಬೆಳೆವಿಮೆ ಕಟ್ಟಿದ ರೈತರಿಗೆ ತಾಂತ್ರಿಕ ತೊಂದರೆಯಿಂದ ಬೆಳೆವಿಮೆ ಇತ್ಯರ್ಥಪಡಿಸಲಾಗಿರಲಿಲ್ಲ. ಇದನ್ನುಇತ್ಯರ್ಥಪಡಿಸಿ 992 ರೈತರಿಗೆ 1.22 ಕೋಟಿ ಮೊತ್ತ ಇತ್ಯರ್ಥಪಡಿಸಲಾಗಿದೆ. 2017ಕ್ಕಿಂತ ಹಿಂದಿನ ಸಾಲಿನ ಹಲವಾರು ತಾಂತ್ರಿಕ ಕಾರಣದಿಂದ (ಆಧಾರ್‌ತಿದ್ದುಪಡಿ, ಬ್ಯಾಂಕ್ ಅಕೌಂಟ್ ತಪ್ಪು ಮಾಹಿತಿ) ಇತ್ಯರ್ಥಪಡಿಸದ 1.26 ಲಕ್ಷ ರೈತರಿಗೆ ಒಟ್ಟು 86.39 ಕೋಟಿ ಎಸ್ಟ್ರೋ ಅಕೌಂಟ್‌ನಲ್ಲಿ ಇಡಲಾಗಿದ್ದ ಮೊತ್ತವನ್ನು ಹಲವಾರು ಸಭೆಗಳ ನಂತರ 85,570 ರೈತರಿಗೆ 56.15 ಕೋಟಿ ಮೊತ್ತ ಇತ್ಯರ್ಥಪಡಿಸಲಾಗಿದೆ ಎಂದರು.
ಹೆಚ್ಚಿನ ಬೆಲೆಗೆ ಯೂರಿಯಾ ರಸಗೊಬ್ಬರ ಮಾರುತ್ತಿದ್ದ ಅಂಗಡಿ ಪತ್ತೆ ಹಚ್ಚಿದ್ದೇವೆ. 148 ರಸಗೊಬ್ಬರ ಅಂಗಡಿಗಳ ಪರವಾನಗಿ ರದ್ದುಗೊಳಿಸಿದ್ದೇವೆ. ಕಳಪೆ ಬೀಜದ ವಿರುದ್ಧ ಸಮರ ಸಾರಿ ಈಗಾಗಲೇ ದಾಳಿನಡೆಸಿ ತನಿಖೆ ಸಾಗಿದೆ. ಆಂಧ್ರಪ್ರದೇಶಕ್ಕೂ ತನಿಖಾಧಿಕಾರಿಗಳು ಹೋಗಲಿದ್ದಾರೆ. ರೈತರು ಕಳಪೆ ಬೀಜ ಖರೀದಿಸಬಾರದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಭು ಹಿಟ್ನಳ್ಳಿ, ಗಿರೀಶ ತುಪ್ಪದ ಇತರರು ಇದ್ದರು.