Advertisement
ಎ. 1ರಿಂದ ಮಾರ್ಚ್ 31ರ ಆರ್ಥಿಕ ವರ್ಷಾಂತ್ಯದಲ್ಲಿ ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾ.ಪಂ.ಗಳು ನಿರಾಸಕ್ತಿ ತೋರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವಾಗಲೇ ಪುತ್ತೂರು, ಕಡಬ ಸುಳ್ಯ ತಾಲೂಕಿನ ಹೆಚ್ಚಿನ ಗ್ರಾ.ಪಂ.ಗಳು ತೆರಿಗೆ ಸಂಗ್ರಹದಲ್ಲಿ ಗಣನೀಯ ಸಾಧನೆ ತೋರಿವೆ.
Related Articles
Advertisement
ತೆರಿಗೆ ಸಂಗ್ರಹಣೆಗೆ ವಿಶೇಷ ಒತ್ತು ನೀಡುವುದಕ್ಕಾಗಿ ಗ್ರಾ.ಪಂ.ಗಳಿಗೆ ಅಧಿಕಾರ ನೀಡಲಾಗಿತ್ತು. ಆದರೆ ಬಹುತೇಕ ಗ್ರಾ.ಪಂ. ಗಳು ಈ ಅಧಿಕಾರವನ್ನೂ ಬಳಸಿಕೊಂಡಿಲ್ಲ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿ ಬಂದಿದೆ. 2015ನೇ ಸಾಲಿನಲ್ಲಿ ತಿದ್ದುಪಡಿ ತಂದಿದ್ದರೂ ಹೆಚ್ಚಿನ ಗ್ರಾ.ಪಂ. ಗಳು ಕೂಡ ತೆರಿಗೆ ಪರಿಷ್ಕರಣೆ ಮಾಡಿಲ್ಲ. ಹಳೆ ದರವನ್ನೇ ವಸೂಲಿ ಮಾಡುತ್ತಿರುವುದರಿಂದ ಸಂಗ್ರಹ ಕಡಿಮೆ, ವೆಚ್ಚ ಹೆಚ್ಚಾಗುತ್ತಿದೆ.
ಗುರಿ ಹಾಗೂ ವಸೂಲಿ
ಪುತ್ತೂರು ತಾಲೂಕಿನ 33 ಗ್ರಾ.ಪಂ.ಗಳಿಗೆ 217.94 ಲಕ್ಷ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಇದರಲ್ಲಿ 179.21 ಲಕ್ಷ ರೂ. ವಸೂಲಿಯಾಗಿದೆ. 38.72 ಲಕ್ಷ ರೂ. ಹೊರ ಬಾಕಿ ಇದೆ. ಸುಳ್ಯ ತಾಲೂಕಿನ 25 ಗ್ರಾ.ಪಂ.ಗಳಿಗೆ ನೀಡಿದ 261.48 ಲಕ್ಷ ರೂ. ಗುರಿಯಲ್ಲಿ 224.77 ಲಕ್ಷ ರೂ. ವಸೂಲಿಯಾಗಿದೆ. 36.70 ಲಕ್ಷ ರೂ. ಹೊರ ಬಾಕಿ ಇದೆ. ಕಡಬ ತಾಲೂಕಿನ 18 ಗ್ರಾ.ಪಂ. ಗಳಿಗೆ 239 ಲಕ್ಷ ರೂ. ಗುರಿ ಇದ್ದು, 194.86 ಲಕ್ಷ ರೂ.ಸಂಗ್ರಹವಾಗಿದೆ. 45 ಲಕ್ಷ ರೂ. ಹೊರ ಬಾಕಿ ಇದೆ.
ಆರ್ಥಿಕ ಸ್ವಾವಲಂಬನೆಗೆ ಅನುಕೂಲ
ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಗ್ರಾ.ಪಂ.ಗಳು ಉತ್ತಮ ಸಾಧನೆ ತೋರಿವೆ. ಆರ್ಥಿಕ ವರ್ಷಾಂತ್ಯದಲ್ಲಿ ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾ.ಪಂ.ಗಳು ತೆರಿಗೆ ವಸೂಲಾತಿಗೆ ಹೆಚ್ಚಿನ ಗಮನ ಹರಿಸಲು ನಿರ್ದೇಶಿಸಲಾಗಿತ್ತು. -ನವೀನ್ ಭಂಡಾರಿ, ಇಒ ಪುತ್ತೂರು, ಕಡಬ ತಾ.ಪಂ.