Advertisement

ರಮೇಶ್ ಅರವಿಂದ್ ನಿರ್ದೇಶನದ ‘100’ ಟ್ರೇಲರ್ ರಿಲೀಸ್ : ಸೈಬರ್ ಲೋಕದ ಥ್ರಿಲ್ಲರ್ ಕಹಾನಿ

12:04 PM Nov 06, 2021 | Team Udayavani |

ಬೆಂಗಳೂರು: ರಮೇಶ್ ಅರವಿಂದ ನಿರ್ದೇಶನದ ‘100’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.

Advertisement

ಚಿತ್ರದ ಮೂಲದ ಎಳೆಯೇ ಮೊಬೈಲ್. ಒಂದು ಮೊಬೈಲ್ ಫೋನಿನಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಒಂದು ಫ್ಯಾಮಿಲಿಯೊಳಗಿನ ಘಟನೆಗಳ ಮೂಲಕ ಹೇಳಲಾಗಿದೆ. ಈ ಘಟನೆಗಳು ಭಿನ್ನ ಭಿನ್ನವಾಗಿದ್ದರೂ ಅದು ನಮ್ಮೊಂದಿಗೂ ನಡೆಯಬಹುದು ಎನ್ನುವುದು ‘100’ ಚಿತ್ರದ ಟ್ರೇಲರ್ ನಲ್ಲಿ ಮೇಲ್ನೊಟಕ್ಕೆ ಕಾಣುವ ಅಂಶ.

ಸಸ್ಪೆನ್ಸ್, ಥ್ರಿಲ್ಲರ್ ಬಿಜಿಎಂ ಹಿಂದೆ ರವಿ ಬಸ್ರೂರು ಅವರ ಕೈಚಳಕ ಇದೆ. ರಚಿತಾ ರಾಮ್, ಪೂರ್ಣ,ಪ್ರಕಾಶ್ ಬೆಳವಾಡಿ,ಶೋಭರಾಜ್,ಬೇಬಿ ಸ್ಮಯಾ,ರಾಜು ತಾಳಿಕೋಟೆ ಮುಂತಾದ ಕಲಾವಿದರು ಟ್ರೇಲರ್ ನಲ್ಲಿ ಹಾಗೆ ಬಂದು ತಮ್ಮ ಪಾತ್ರದ ಎಳೆಯನ್ನು ಬಿಟ್ಟು ಹೋಗುತ್ತಾರೆ.

ರಮೇಶ್ ಅರವಿಂದ್ ಫ್ಯಾಮಿಲಿ ಮ್ಯಾನ್ ಆಗಿ ಕುಟುಂಬದ ರಕ್ಷಣೆ ಮತ್ತು ಪೊಲೀಸ್ ನಾಗಿ ತಮ್ಮ ಕರ್ತವ್ಯ ಎರಡು ಶೆಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್  19 ರಂದು ‘100’ ಚಿತ್ರ ರಿಲೀಸ್ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next