Advertisement

ಗ್ರಾಮ ವಿಕಾಸ ಯೋಜನೆಯಡಿ 100 ಕೋಟಿ ರೂ. ಬಿಡುಗಡೆ

11:28 PM Feb 21, 2020 | Lakshmi GovindaRaj |

ಬೆಂಗಳೂರು: ಸುವರ್ಣ ಗ್ರಾಮೋದಯದಡಿ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅನುಷ್ಠಾನದಲ್ಲಿರುವ ಗ್ರಾಮಗಳಿಗೆ 100 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. 400 ಕೋಟಿ ರೂ. ಮೊತ್ತದ ಯೋಜನೆಯ ನಾಲ್ಕನೇ ಹಾಗೂ ಕೊನೆಯ ಕಂತಿನ ಭಾಗವಾಗಿ 100 ಕೋಟಿ ರೂ. ಹಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗಿದೆ.

Advertisement

ರಾಜ್ಯದ 189 ಗ್ರಾಮೀಣ ವಿಧಾನಸಭೆ ಕ್ಷೇತ್ರಗಳ 990 ಗ್ರಾಮಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು 100 ಕೋಟಿ ರೂ. ಅನುದಾನ ಎಲ್ಲ ಗ್ರಾಮಗಳಿಗೆ ಹಂಚಿಕೆಯಾಗಲಿದೆ. ಗ್ರಾಮ ವಿಕಾಸ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆ ಮಾಡಿದ ಗ್ರಾಮಗಳ ಅನುಮೋದಿತ ಗ್ರಾಮಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಅನುಷ್ಟಾನಕ್ಕಾಗಿ ಮಾತ್ರ ವಿನಿಯೋಗಿಸಬೇಕು.

ಯೋಜನೆಯ ಆರ್ಥಿಕ ಹಾಗೂ ಭೌತಿಕ ಪ್ರಗತಿ ವರದಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ವಿಧಾನಸಭೆ ಕ್ಷೇತ್ರಾವಾರು ಕ್ರೋಢೀಕರಿಸಿ ಉಪಯುಕ್ತತಾ ಪತ್ರವನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳು ಇಲಾಖೆಗೆ ಸಲ್ಲಿಸಬೇಕು. ಗ್ರಾಮ ಪಂಚಾಯಿತಿಗಳು ಕಾಮಗಾರಿ ಬಿಲ್ಲುಗಳ ಹಣ ಪಾವತಿಸುವಾಗ ಸಂಬಂಧಪಟ್ಟ ಅನುಷ್ಠಾನ ಸಂಸ್ಥೆಗಳು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಕಡ್ಡಾಯವಾಗಿ ಎಲ್ಲ ಮಾಹಿತಿ ಅಳವಡಿಸಬೇಕು. ಗ್ರಾಪಂಗಳು ಪೂರ್ಣಗೊಂಡ ಕಾಮಗಾರಿಗಳ ಹಣವನ್ನು ಚೆಕ್‌ ಮೂಲಕ ಮಾತ್ರ ಪಾವತಿಸಬೇಕು. ನಗದು ಪಾವತಿಸುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next