ಬೆಂಗಳೂರು: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕರೆಯಲಾಗುವ 100 ಕೋಟಿ ರೂ. ಮೀರಿದ ಟೆಂಡರ್‌ಗಳ ಸಂದರ್ಭದಲ್ಲಿ ಕೆಪಿಡಬ್ಲ್ಯುಡಿ ಗುತ್ತಿಗೆದಾರರ ಜತೆಗೆ ಸಿಪಿಡಬ್ಲ್ಯುಡಿಯ ಅರ್ಹ ಗುತ್ತಿಗೆದಾರರಿಗೂ ಅವಕಾಶ ನೀಡಲು ಸರಕಾರ ನಿರ್ಧರಿಸಿದೆ.
ರಾಜ್ಯ ಟೆಂಡರ್ ಪೂರ್ವ ಪರಿಶೀಲನ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕೆಪಿಡಬ್ಲ್ಯುಡಿಯ ದರ್ಜೆ-1ರ ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸಬೇಕು ಎಂದಿ ದ್ದರೂ ಕೇಂದ್ರ ಸರಕಾರ, ಕೇಂದ್ರ ಸ್ವಾಮ್ಯದ ಸಂಸ್ಥೆಗಳು, ಇತರ ರಾಜ್ಯ ಸರಕಾರಗಳಲ್ಲಿ ನೋಂದಣಿ ಮಾಡಿಕೊಂಡಿರುವ ಅರ್ಹ ಗುತ್ತಿಗೆದಾರ ರಿಗೂ ಅವಕಾಶ ನೀಡಬೇಕು ಎಂದು ಶಿಫಾರಸಿನಲ್ಲಿ ಸ್ಪಷ್ಟಪಡಿಸಿದೆ.
ಸೆ.16ರಂದು ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲಾ ವೈದ್ಯಕೀಯ ಕಾಲೇಜುಗಳ ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿ ತನಿಖಾ ಸಮಿತಿಯೂ ಸಿಪಿಡಬ್ಲ್ಯುಡಿ ಗುತ್ತಿಗೆದಾರರಿಗೆ ಅವಕಾಶ ನೀಡುವ ಬಗ್ಗೆ ಪ್ರಸ್ತಾವಿಸಿತ್ತು. 100 ಕೋಟಿ ರೂ. ಮೀರಿದ ಟೆಂಡರ್‌ಗಳನ್ನು ಕರೆಯುವಾಗ ಕೆಪಿಡಬ್ಲ್ಯುಡಿ ಗುತ್ತಿಗೆದಾರರ ಜತೆಗೆ ಸಿಪಿಡಬ್ಲ್ಯುಡಿ ಸೇರಿಸಿ ಟೆಂಡರ್ ಕರೆಯುವ ಬಗ್ಗೆ ಸೂಕ್ತ ಸುತ್ತೋಲೆ ಹೊರಡಿಸುವಂತೆ ತನಿಖಾ ಸಮಿತಿಯ 3ನೇ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಗಿತ್ತು.
ಇದೆಲ್ಲದರ ಹಿನ್ನೆಲೆಯಲ್ಲಿ ಇನ್ನು ಮುಂದೆ 100 ಕೋಟಿ ರೂ. ಮೀರಿದ ಕಾಮಗಾರಿಗಳಿಗೆ ಟೆಂಡರ್ ಕರೆಯುವಾಗ ಕೆಪಿಡಬ್ಲ್ಯುಡಿ ಗುತ್ತಿಗೆದಾರರಷ್ಟೇ ಅಲ್ಲದೆ, ಸಿಪಿಡಬ್ಲ್ಯುಡಿ ಗುತ್ತಿಗೆದಾರರಿಗೂ ಬಿಡ್‌ನಲ್ಲಿ ಭಾಗವ
ಹಿಸಲು ಅನುವು ಮಾಡಿಕೊಡಬೇಕು. ಜತೆಗೆ ಹಿಂದೆ ನಿಗದಿಪಡಿಸಿರುವ ಎಲ್ಲ ಮಾನದಂಡಗಳನ್ನೂ ಕಟ್ಟು ನಿಟ್ಟಾಗಿ ಪಾಲಿಡುವಂತೆಯೂ ಸೂಚಿಸಲಾಗಿದೆ.