Advertisement

ಒಂದೇ ದಿನ ಶತಕ ಬಾರಿಸಿದ ಕೋವಿಡ್

01:08 PM Jul 17, 2020 | Suhan S |

ರಾಯಚೂರು: ಇಷ್ಟು ದಿನ ಎರಡಂಕಿಯಲ್ಲೇ ಇದ್ದ ಕೋವಿಡ್ ಸೋಂಕಿತರ ಸಂಖ್ಯೆ ಗುರುವಾರ ಒಂದೇ ದಿನ 117 ತಲುಪುವ ಮೂಲಕ ಜಿಲ್ಲೆಯ ಜನರನ್ನು ದಿಗ್ಮೂಢರನ್ನಾಗಿಸಿದೆ. ಮೊದಲ ಬಾರಿಗೆ ನೂರರ ಗಡಿ ದಾಟಿದ್ದು, ಆ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 931ಕ್ಕೆ ತಲುಪಿದೆ.

Advertisement

ಮುಂಬಯಿ ವಲಸಿಗರಿಂದ ಜಿಲ್ಲೆಗೆ ಕಾಲಿಟ್ಟ ಕೋವಿಡ್ ವೈರಸ್‌ ಕ್ರಮೇಣ ಸಮುದಾಯತ್ತ ವಾಲಿದೆ. ಈಗ ಬಹುತೇಕ ಪ್ರಾಥಮಿಕ, ದ್ವಿತೀಯ ಸಂಪರ್ಕಗಳಿಂದಲೇ ಸೋಂಕು ಹರಡುತ್ತಿದೆ. ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಲಾಕ್‌ಡೌನ್‌ ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗುರುವಾರ 52 ಜನ ಸೇರಿದಂತೆ ಈವರೆಗೆ 536 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನಿಂದ 98, ಲಿಂಗಸುಗೂರು 69, ಮಾನ್ವಿ 78, ಸಿಂಧನೂರು 89 ಮತ್ತು ರಾಯಚೂರು ತಾಲೂಕಿನಿಂದ 113 ಸೇರಿದಂತೆ ಒಟ್ಟು 447 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್‌-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೋವಿಡ್‌-19 ಪರೀಕ್ಷೆಗಾಗಿ ಕಳುಹಿಸಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ 414 ನೆಗೆಟಿವ್‌ ಆಗಿವೆ. ಒಟ್ಟಾರೆ ಜಿಲ್ಲೆಯಿಂದ ಈವರೆಗೆ 30,268 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಕಳುಹಿಸಿದ್ದು, ಅವುಗಳಲ್ಲಿ 26,099 ವರದಿಗಳು ನೆಗೆಟಿವ್‌ ಆಗಿವೆ. ಉಳಿದ3,232 ಸ್ಯಾಂಪಲ್‌ಗ‌ಳ ಫಲಿತಾಂಶ ಬರಬೇಕಿದೆ. ಫೀವರ್‌ ಕ್ಲಿನಿಕ್‌ಗಳಲ್ಲಿ ಗುರುವಾರ 609 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಒಟ್ಟು 135 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ ಇರಿಸಿ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next