Advertisement

ಶೇ. 100ರಷ್ಟು ವಯಸ್ಕರಿಗೆ ಲಸಿಕೆ: ಮಾಂಡವಿಯಾ ಶ್ಲಾಘನೆ

01:05 AM Sep 13, 2021 | Team Udayavani |

ಹೊಸದಿಲ್ಲಿ: ತಮ್ಮ ರಾಜ್ಯಗಳಲ್ಲಿ ಶೇ. 100ರಷ್ಟು ವಯಸ್ಕರಿಗೆ ಲಸಿಕೆ ನೀಡಿರುವ ಗೋವಾ, ಹಿಮಾಚಲ ಪ್ರದೇಶ, ಲಡಾಖ್‌, ಲಕ್ಷದ್ವೀಪ, ಸಿಕ್ಕಿಂ, ದಾದ್ರಾ ಮತ್ತು ನಗರ್‌ ಹವೇಲಿ, ದಿಯು ದಮನ್‌ನ ಸರಕಾರಗಳನ್ನು ಕೇಂದ್ರ ಆರೋಗ್ಯ ಸಚಿವರಾದ ಮನ್‌ಸುಖ್‌ ಮಾಂಡವಿಯಾ ಶ್ಲಾಘಿಸಿದ್ದಾರೆ.

Advertisement

ಈ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ನೌಕರರ ಸೇವೆ ನಿಜಕ್ಕೂ ಅಭಿನಂದನಾರ್ಹ ಎಂದಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್‌ ಹವೇಲಿ, ದಮನ್‌ ಮತ್ತು ದಿಯುನಲ್ಲಿ ಒಟ್ಟು 6.26 ಲಕ್ಷ ವಯಸ್ಕರಿಗೆ ಲಸಿಕೆ ಹಾಕಲಾಗಿದೆ.

ಗೋವಾದಲ್ಲಿ 11.83 ಲಕ್ಷ ವಯಸ್ಕರಿಗೆ, ಹಿಮಾಚಲ ಪ್ರದೇಶ 55.74 ಲಕ್ಷ, ಲಡಾಖ್‌ನಲ್ಲಿ 1.97 ಲಕ್ಷ, ಲಕ್ಷದ್ವೀಪದಲ್ಲಿ 53,499, ಸಿಕ್ಕಿಂನಲ್ಲಿ 5.10 ಲಕ್ಷ ವಯಸ್ಕರಿಗೆ ಲಸಿಕೆ ಹಾಕಲಾಗಿದೆ. ಇದುವರೆಗೆ ದೇಶದಲ್ಲಿ 74 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next