Advertisement

ಭಾರತದ ದ್ವಿತೀಯ ವಿಶ್ವಕಪ್‌ ವಿಜಯ ಹತ್ತು ತುಂಬಿದ ಹೊತ್ತು

11:20 PM Apr 01, 2021 | Team Udayavani |

2011ರ ಎಪ್ರಿಲ್‌ ಎರಡು ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌ ಕನಸೊಂದು ಸಾಕಾರಗೊಂಡ ದಿನ. ಅಂದು ಟೀಮ್‌ ಇಂಡಿಯಾ ಎರಡನೇ ಸಲ ಏಕದಿನ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಶುಕ್ರವಾರ ಧೋನಿ ಪಡೆಯ ಈ ವಿಜಯೋತ್ಸವದ ಹರ್ಷಕ್ಕೆ ಭರ್ತಿ ಹತ್ತು ವರ್ಷ!

Advertisement

2011ರ ಎಪ್ರಿಲ್‌ 2. ರಾತ್ರಿ ಹತ್ತು ದಾಟಿದ ಹೊತ್ತು. ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ ಭಾರತೀಯ ಕ್ರಿಕೆಟಿನ ಹೊಸ ಇತಿಹಾಸವೊಂದಕ್ಕೆ ಸಾಕ್ಷಿಯಾಗಲು ಭೋರ್ಗರೆಯುತ್ತ ನಿಂತಿತ್ತು. ಕ್ರಿಕೆಟ್‌ ಅಭಿಮಾನಿಗಳ ಗೌಜು, ಬೊಬ್ಬೆ, ಅಬ್ಬರಕ್ಕೆ ಸಮೀಪದ ಅರಬ್ಬಿ ಸಮುದ್ರ ಕೂಡ ಸ್ತಬ್ಧವಾಗಿತ್ತು!

ಶ್ರೀಲಂಕಾದ ವೇಗಿ ನುವಾನ್‌ ಕುಲಶೇಖರ 49ನೇ ಓವರ್‌ ಎಸೆಯಲು ಸಜ್ಜಾಗಿದ್ದರು. ಮೊದಲ ಎಸೆತಕ್ಕೆ ಯುವರಾಜ್‌ ಸಿಂಗಲ್‌ ತೆಗೆದರು. ಮುಂದಿನ ಸ್ಟ್ರೈಕರ್‌ ಧೋನಿ. ಟೀಮ್‌ ಇಂಡಿಯಾ ಕಪ್ತಾನ ಬಾರಿಸಿದ ಚೆಂಡು ಲಾಂಗ್‌ಆನ್‌ ಮಾರ್ಗದಲ್ಲಿ ಆಕಾಶಕ್ಕೆ ಚಿಮ್ಮಿತು.

ಅಷ್ಟೇ, “ಧೋನಿ ಫಿನಿಶಸ್‌ ಇಟ್‌ ಆಫ್ ಇನ್‌ ಸ್ಟೈಲ್‌, ಇಂಡಿಯಾ ಲಿಫ್ಟ್$Õ ದ ವರ್ಲ್ಡ್ ಕಪ್‌ ಆಫ್ಟರ್‌ 28 ಇಯರ್…’ ರವಿಶಾಸಿŒ ತಮ್ಮದೇ ಸ್ಟೈಲ್‌ನಲ್ಲಿ ಭಾರತದ ಗೆಲುವನ್ನು ಘೋಷಿಸುತ್ತಿದ್ದರು. ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌ ಕನಸೊಂದು ಸಾಕಾರಗೊಂಡಿತ್ತು. ಭಾರತ ಎರಡನೇ ಸಲ ಏಕದಿನ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಶುಕ್ರವಾರ ಈ ಸಂಭ್ರಮಕ್ಕೆ ಭರ್ತಿ ಹತ್ತು ವರ್ಷ!

1983ರ ಬಳಿಕದ ನಿರೀಕ್ಷೆ

Advertisement

1983ರಲ್ಲಿ “ಕಪಿಲ್‌ ಡೆವಿಲ್ಸ್‌’ ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ತಂದಿತ್ತ ಕ್ಷಣದಿಂದ ದೇಶದ ಕ್ರಿಕೆಟ್‌ ದಿಕ್ಕೇ ಬದಲಾಗಿತ್ತು. ಅಲ್ಲೊಂದು ಕ್ರಾಂತಿ ಸಂಭವಿಸಿತ್ತು. ದೇಶದ ಕ್ರೀಡಾಭಿಮಾನಿಗಳ ಪಾಲಿಗೆ ಕಪಿಲ್‌ ಸಾಧನೆ ದೊಡ್ಡ ಸ್ಫೂರ್ತಿಯಾಗಿತ್ತು. ಇಲ್ಲಿಂದ ಮುಂದೆ ಪ್ರತೀ ವಿಶ್ವಕಪ್‌ ಬಂದಾಗಲೂ ಭಾರತ ತಂಡದ ಮೇಲಿನ ನಿರೀಕ್ಷೆ ಹೆಚ್ಚುತ್ತಲೇ ಇತ್ತು; ಭಾರತ ನಿರೀಕ್ಷೆಯ ಭಾರಕ್ಕೆ ಕುಸಿಯುತ್ತಲೇ ಇತ್ತು. ಅಜರುದ್ದೀನ್‌, ಗಂಗೂಲಿ, ದ್ರಾವಿಡ್‌ ಅವರೆಲ್ಲರ ಸಾರಥ್ಯದಲ್ಲಿ ಬಲಿಷ್ಠ ಪಡೆಯನ್ನೇ ಹೊಂದಿದ್ದರೂ ಭಾರತಕ್ಕೆ ಕಪ್‌ ಒಲಿದಿರಲಿಲ್ಲ.

2003ರಲ್ಲಿ ಗಂಗೂಲಿ ಪಡೆ ಫೈನಲ್‌ಗೆ ಲಗ್ಗೆ ಇರಿಸಿದ್ದು ಈ ಅವಧಿಯ ಮಹಾನ್‌ ಸಾಧನೆ. ಆಗಲೂ ತಂಡ ಸಶಕ್ತವಾಗಿತ್ತು. ಆದರೆ ಕಾಂಗರೂ ಅಬ್ಬರದ ಮುಂದೆ ಭಾರತದ ಆಟ ನಡೆಯಲಿಲ್ಲ. ಈ ಕೊರತೆ ನೀಗಿದ್ದು 2011ರಲ್ಲಿ. ಭಾರತ 6 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿಸಿ ತವರಲ್ಲೇ ವಿಶ್ವಕಪ್‌ ಎತ್ತಿದ ಮೊದಲ ತಂಡವೆಂಬ ಹಿರಿಮೆಗೂ ಪಾತ್ರವಾಯಿತು.

ಭಾರತವೇ ಫೇವರಿಟ್‌ :

ಈ ಕೂಟದಲ್ಲಿ ಭಾರತವೇ ಫೇವರಿಟ್‌ ತಂಡವಾ ಗಿತ್ತು. ಅಷ್ಟೊಂದು ಬಲಿಷ್ಠ ಹಾಗೂ ವೈವಿಧ್ಯಮಯ ತಂಡ ನಮ್ಮದಾಗಿತ್ತು. ಪ್ರಶಸ್ತಿಯ ಹಾದಿಯಲ್ಲಿ ಭಾರತದ ಸೋತದ್ದು ದಕ್ಷಿಣ ಆಫ್ರಿಕಾಕ್ಕೆ ಮಾತ್ರ. ಬದ್ಧ ಎದುರಾಳಿ ಪಾಕಿಸ್ಥಾನವನ್ನು ಸೆಮಿಫೈನಲ್‌ನಲ್ಲಿ ಬಗ್ಗುಬಡಿದಿತ್ತು. ಇನ್ನೊಂದು ಉಪಾಂತ್ಯದಲ್ಲಿ ಶ್ರೀಲಂಕಾ ನ್ಯೂಜಿಲ್ಯಾಂಡನ್ನು ಮಣಿಸಿತ್ತು.

ಸಚಿನ್‌ಗೆ ಅರ್ಪಣೆ :

ಈ ಪ್ರಶಸ್ತಿಯನ್ನು ಕ್ರಿಕೆಟಿಗರೆಲ್ಲ ಸೇರಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ಗೆ ಅರ್ಪಿಸಿದರು. ಅವರ ವರ್ಣರಂಜಿತ ಕ್ರಿಕೆಟ್‌ ಬದುಕು ವಿಶ್ವಕಪ್‌ ಇಲ್ಲದೇ ಪರಿಪೂರ್ಣವಾಗುತ್ತಿರಲಿಲ್ಲ. ಸಚಿನ್‌ 6ನೇ ಹಾಗೂ ಕೊನೆಯ ವಿಶ್ವಕಪ್‌ ಆಡಲಿಳಿದಿದ್ದರು. ಹೀಗಾಗಿ ಆರಂಭದಿಂದಲೇ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಆಡಿದರು.

ಪಾಕ್‌ ಎದುರಿನ ಸೆಮಿಫೈನಲ್‌ನಲ್ಲಿ 85 ರನ್‌ ಬಾರಿಸಿ ಪಂದ್ಯಶ್ರೇಷ್ಠರಾಗಿದ್ದ ಸಚಿನ್‌ ಫೈನಲ್‌ನಲ್ಲಿ 18 ರನ್ನಿಗೇ ಆಟ ಮುಗಿಸಿದ್ದರು. ಇದಕ್ಕೂ ಮುನ್ನ ಸೆಹವಾಗ್‌ ಸೊನ್ನೆಗೆ ವಾಪಸಾಗಿದ್ದರು. ಇಂದಿನ ಕಪ್ತಾನ ಕೊಹ್ಲಿ ವಿಕೆಟ್‌ 114 ರನ್‌ ಆದಾಗ ಬಿತ್ತು. ಏನಪ್ಪ ಇದು ಅವಸ್ಥೆ ಎಂದು ಎಲ್ಲರೂ ಚಿಂತೆಯಲ್ಲಿದ್ದಾಗ ಗಂಭೀರ್‌-ಧೋನಿ ಶತಕದ ಜತೆಯಾಟದ ಮೂಲಕ ತಂಡವನ್ನು ಮೇಲೆತ್ತಿದರು. ಹೊಸ ಇತಿಹಾಸಕ್ಕೆ ಇವರ ಆಟ ದಿಕ್ಸೂಚಿಯಾಯಿತು.

ಮುಂದಿನದು ಟೀಮ್‌ ಇಂಡಿಯಾದ ಮೂರನೇ ವಿಶ್ವಕಪ್‌ ನಿರೀಕ್ಷೆ!

ಭಾರತ ತಂಡ :

ಮಹೇಂದ್ರ ಸಿಂಗ್‌ ಧೋನಿ (ನಾಯಕ), ವೀರೇಂದ್ರ ಸೆಹವಾಗ್‌ (ಉಪನಾಯಕ), ಗೌತಮ್‌ ಗಂಭೀರ್‌, ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ವಿರಾಟ್‌ ಕೊಹ್ಲಿ, ಯೂಸುಫ್ ಪಠಾಣ್‌, ಜಹೀರ್‌ ಖಾನ್‌, ಹರ್ಭಜನ್‌ ಸಿಂಗ್‌, ಆರ್‌. ಅಶ್ವಿ‌ನ್‌, ಆಶಿಷ್‌ ನೆಹ್ರಾ, ಮುನಾಫ್ ಪಟೇಲ್‌, ಎಸ್‌. ಶ್ರೀಶಾಂತ್‌, ಪೀಯೂಷ್‌ ಚಾವ್ಲಾ. ಕೋಚ್‌: ಗ್ಯಾರಿ ಕರ್ಸ್ಟನ್‌.

Advertisement

Udayavani is now on Telegram. Click here to join our channel and stay updated with the latest news.

Next