Advertisement

ಐನ್‌ಸ್ಟೀನ್‌ ಮೀರಿಸಿದ ಬಾಲಕ

09:35 AM Jan 27, 2018 | Team Udayavani |

ಲಂಡನ್‌: ಭಾರತೀಯ ಮೂಲದ ಬಾಲಕ ಮೆಹುಲ್‌ ಗರ್ಗ್‌(10) ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾನೆ. ಕುತೂಹಲಕಾರಿ ವಿಚಾರ ವೆಂದರೆ ವಿಶ್ವ ವಿಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್‌ ಐನ್‌ಸ್ಟೀನ್‌ ಮತ್ತು ಸ್ಟೀಫ‌ನ್‌ ಹಾಕಿಂಗ್ಸ್‌ರನ್ನೂ ಮೀರಿಸಿದ್ದಾನೆ. ಪರೀಕ್ಷೆಯಲ್ಲಿ ಈತ ಗರಿಷ್ಠ ಅಂದರೆ 162 ಅಂಕಗಳನ್ನು ಪಡೆದಿದ್ದಾನೆ. ಇದು ಐನ್‌ಸ್ಟೀನ್‌ ಮತ್ತು ಹಾಕಿಂಗ್ಸ್‌ರದ್ದಕ್ಕಿಂತ 2 ಪಾಯಿಂಟ್‌ಗಳಷ್ಟು ಹೆಚ್ಚಾಗಿ ರುವುದು ಗಮನಾರ್ಹ. 

Advertisement

ಕಳೆದ ವರ್ಷ ಮೆಹುಲ್‌ ಗರ್ಗ್‌ನ ಸಹೋದರ 13 ವರ್ಷದ ಧ್ರುವ್‌ ಗರ್ಗ್‌ ಇದೇ ಪರೀಕ್ಷೆಯಲ್ಲಿ 162 ಅಂಕಗಳನ್ನು ಗಳಿಸಿದ್ದ. ಇಡೀ ಜಗತ್ತಿನಲ್ಲೇ ಶೇ.1ರಷ್ಟು ಮಂದಿ ಮಾತ್ರ ಈ ಮಟ್ಟದ ಐಕ್ಯೂ ಹೊಂದಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next