ಸಿಡ್ನಿ: ಆಸ್ಟ್ರೇಲಿಯದ 10 ವರ್ಷದ ಬಾಲಕಿಯೊಬ್ಬಳು ಅಪರೂಪದ ಕಾಯಿಲೆಯಾದ “ಕಾಂಪ್ಲೆಕ್ಸ್ ರೀಜನಲ್ ಪೇನ್ ಸಿಂಡ್ರೋಮ್'(ಸಿಆರ್‌ಪಿಎಸ್)ನಿಂದ ಬಳಲುತ್ತಿದ್ದಾಳೆ. ಈ ಕಾಯಿಲೆಯನ್ನು ಮಾನವಕುಲದ “ಅತ್ಯಂತ ನೋವಿನ ಸ್ಥಿತಿ’ ಎಂದು ಕರೆಯಲಾಗಿದೆ.
ಕುಟುಂಬದ ಜತೆಗೆ ಬಾಲಕಿಯು ಫಿಜಿಗೆ ಪ್ರವಾಸ ಹೋಗಿದ್ದ ಸಂದ ರ್ಭದಲ್ಲಿ ಆಕೆಯ ಬಲಗಾಲಿಗೆ ಸೋಂಕು ತಗುಲಿದೆ. ಇದನ್ನು ಪರೀಕ್ಷಿಸಿದಾಗ ಆಕೆ ಸಿಆರ್‌ಪಿಎಸ್‌ಗೆ ತುತ್ತಾಗಿ ರುವುದು ತಿಳಿಯಿತು. ಇದರಿಂದ ಬಾಲಕಿಯು ತೀವ್ರನೋವಿನಿಂದ ಬಳಲುತ್ತಿದ್ದಾಳೆ.
ಸ್ವಲ್ಪ ನಡೆದರೆ ಅಥವಾ ಯಾರಾದರೂ ಕಾಲನ್ನು ಮುಟ್ಟಿದರೂ ಸಾಕು ತೀವ್ರ ನೋವು ಉಂಟಾಗುತ್ತದೆ. “ಇದರಿಂದ ನನಗೆ ಸ್ನಾನ ಮಾಡಲು, ಪ್ಯಾಂಟ್ ಧರಿಸಲು, ದಿನನಿತ್ಯದ ಚಟುವಟಿಕೆ ಮಾಡಲು, ಎಲ್ಲರಂತೆ ಬಾಲ್ಯವನ್ನು ಕಳೆಯಲು ಸಾಧ್ಯ ವಾಗುತ್ತಿಲ್ಲ’ ಎಂದು ಬೆಲ್ಲಾ ಅಳಲು ತೋಡಿಕೊಂಡಿದ್ದಾಳೆ.
ಹೆಚ್ಚಿನ ಚಿಕಿತ್ಸೆಗಾಗಿ ಬೆಲ್ಲಾ ಪೋಷಕರು ಆಕೆಯನ್ನು ಅಮೆರಿ ಕದ ಆಸ್ಪತ್ರೆಗೆ ಕರೆದು ಕೊಂಡು ಹೋಗಿ, ತಪಾಸಣೆಗೆ ಒಳ ಪಡಿಸಿದ್ದಾರೆ. ಆದರೆ ಚಿಕಿತ್ಸೆಗಾಗಿ ಹಣವಿಲ್ಲದ ಕಾರಣಕ್ಕಾಗಿ “ಗೋ ಫಂಡ್ ಮೀ’ ಅಭಿಯಾನ ಆರಂಭಿಸಿದ್ದಾರೆ.