ಮುಂಬಯಿ: ಕೆಲವರಿಗೆ ಸ್ಟ್ರೀಮ್ ಫುಡ್ ಗಳೆಂದರೆ ತುಂಬಾ ಅಚ್ಚುಮೆಚ್ಚು. ರಸ್ತೆ ಬದಿಯಲ್ಲಿ ಸಿಗುವ ಆಹಾರವನ್ನು ಕೈ ಚಪ್ಪರಿಸಿ ತಿನ್ನುವವರಿರುತ್ತಾರೆ. ಟೇಸ್ಟಿಯಾಟ್ಲಾಸ್ ( ಪಾಕ ವಿಧಾನಗಳ ವಿಮರ್ಶೆಯನ್ನು ಮಾಡುವ ಟ್ರಾವೆಲ್ ಗೈಡ್) ಇತ್ತೀಚೆಗೆ ಅತ್ಯಂತ ಕಳಪೆ ರೇಟಿಂಗ್ ಪಡೆದ ಭಾರತೀಯ ಸ್ಟ್ರೀಮ್ ಫುಡ್ ಗಳ ಪಟ್ಟಿಯನ್ನು ಸಂಗ್ರಹಿಸಿದ್ದು, ಅಚ್ಚರಿ ಎಂದರೆ ಇದರಲ್ಲಿ ಜನಪ್ರಿಯ ಸ್ಟ್ರೀಮ್ ಫುಡ್‌ಗಳ ಹೆಸರು ಕೂಡ ಸೇರಿದೆ.
ಪಟ್ಟಿಯ ರ್‍ಯಾಕಿಂಗ್ ಆಗಸ್ಟ್ 17 ರವರೆಗೆ ಬಂದ ರೇಟಿಂಗ್ ಗಳನ್ನು ಒಳಗೊಂಡಿದೆ. ಒಟ್ಟು ವಿವಿಧ ಆಹಾರಗಳಿಗೆ 2,508 ರೇಟಿಂಗ್‌ಗಳು ಬಂದಿದ್ದು, 1,773 ರೇಟಿಂಗ್ ಸರಿಯೆಂದು ಪರಿಗಣಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಜನಪ್ರಿಯ ಸ್ಟ್ರೀಟ್ ಫುಡ್ ಆಗಿರುವ, ಬಹತೇಕರ ಹಸಿವನ್ನು ಕಡಿಮೆ ದರದಲ್ಲಿ ನೀಗಿಸುವ ದಹಿ ಪುರಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಮಧ್ಯಪ್ರದೇಶದ ʼಸೇವ್ʼ (ಮಸಾಲೆಯುಕ್ತ ತಿಂಡಿ, ಬೇಳೆ ಹಿಟ್ಟು ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುವ ಸ್ನ್ಯಾಕ್) ಅತ್ಯಂತ ಕಳಪೆ ಭಾರತೀಯ ಸ್ಟ್ರೀಮ್ ಫುಡ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನದಲ್ಲಿ ಗುಜರಾತಿಗರ ನೆಚ್ಚಿನ ಸ್ಟ್ರೀಟ್ ಫುಡ್ ಗಳಲ್ಲಿ ಒಂದಾಗಿರುವ ದಬೇಲಿ ಮೂರನೇ ಸ್ಥಾನದಲ್ಲಿದೆ.
ಇನ್ನು ಮುಂಬಯಿಯ ಜನಪ್ರಿಯ ಬೀದಿ ಬದಿಯ ಆಹಾರಗಳಲ್ಲಿ ಒಂದಾಗಿರುವ ಬಾಂಬೆ ಸ್ಯಾಂಡ್‌ವಿಚ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಆರೋಗ್ಯಕರವೆಂದು ಕರೆಯಲಾಗುವ ಸ್ಯಾಂಡ್ ವಿಚ್ ಕಳಪೆ ಬೀದಿ ಬದಿಯ ಆಹಾರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಬಹುತೇಕ ಎಲ್ಲಾ ಕಡೆ ಸಿಗುವ ಎಗ್ ಭುರ್ಜಿಯನ್ನು ಜನ ಅಷ್ಟಾಗಿ ಇಷ್ಟಪಡದೆ 5 ನೇ ಸ್ಥಾನದಲ್ಲಿದೆ.
ಯಾವ ಯಾವ ಫುಡ್ ಗಳಿವೆ..
ದಹಿ ಪುರಿ (ಮಹಾರಾಷ್ಟ್ರ)
ಸೇವ್ (ಮಧ್ಯ ಪ್ರದೇಶ)
ದಬೇಲಿ (ಗುಜರಾತ್)
ಸ್ಯಾಂಡ್‌ವಿಚ್ (ಮುಂಬಯಿ)
ಎಗ್ ಭುರ್ಜಿ
ದಹಿ ವಡಾ (ಉತ್ತರ ಭಾರತ)
ಸಾಬುದಾನ ವಡಾ (ಮಹಾರಾಷ್ಟ್ರ)
ಪಾಪ್ರಿ ಚಾಟ್ ( ದಕ್ಷಿಣ ಭಾರತ)
ಗೋಬಿ ಪರಾಠ (ಪಂಜಾಬ್)
ಬೋಂಡಾ ಅಥವಾ ಆಲೂಗಡ್ಡೆ ಬೋಂಡಾ (ದಕ್ಷಿಣ ಭಾರತ)