Advertisement

ಮಹಿಳೆ ಹೊಟ್ಟೆಯಲ್ಲಿ 10 ಕೆಜಿ ತೂಕದ ಗಡ್ಡೆ!

03:38 PM Jan 19, 2022 | Suhan S |

ಸಾಗರ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಾಗೇಂದ್ರಪ್ಪ ಅವರ ನೇತೃತ್ವದ ವೈದ್ಯ ತಂಡದಿಂದ 50 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ಸುಮಾರು 10 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಬುಧವಾರ ಯಶಸ್ವಿಯಾಗಿ ತೆಗೆಯಲಾಗಿದೆ.

Advertisement

ಮಹಿಳೆಯು ಈಚೆಗೆ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಬಂದಿದ್ದಾಗ ಹೊಟ್ಟೆಭಾಗವನ್ನು ಸ್ಕ್ಯಾನ್ ಮಾಡಿದಾಗ ಗಡ್ಡೆ ಬೆಳೆದಿರುವುದು ಬೆಳಕಿಗೆ ಬಂದಿದೆ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುಮಾರು ೨ ಗಂಟೆಗಳ ಕಾಲ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿತು. ಮಹಿಳೆಯು ಆರೋಗ್ಯವಾಗಿದ್ದಾರೆ. ಶಸ್ತ್ರ ಚಿಕಿತ್ಸೆಯಲ್ಲಿ ಅರವಳಿಕೆ ತಜ್ಞೆ ಸುಷ್ಮಾ ಪತ್ತರ್, ಆರೋಗ್ಯ ಸಹಾಯಕಿಯರಾದ ಸುವರ್ಣ, ರೋಹಿಣಿ ಹಾಗೂ ಚಂದ್ರು ಸಹಕಾರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next