Advertisement

ಕುಷ್ಟಗಿಯ 10 ಗ್ರಾಮ ಸೋಂಕು ಮುಕ್ತ

02:58 PM Jun 08, 2021 | Team Udayavani |

ಕುಷ್ಟಗಿ: ಗ್ರಾಪಂ, ತಾಪಂ ಹಾಗೂ ಆರೋಗ್ಯ, ಕಂದಾಯ ಇಲಾಖೆಗಳ ಸಂಘಟಿತ ಕೆಲಸದ ಪರಿಣಾಮ ಕುಷ್ಟಗಿ ತಾಲೂಕಿನ 10 ಗ್ರಾಮಗಳು ಕೊರೊನಾ ಮುಕ್ತವಾಗಿವೆ.

Advertisement

ಕೋವಿಡ್ 2ನೇ ಅಲೆ ಮಾರ್ಚ್‌ ಕೊನೆ ಹಾಗೂ ಏಪ್ರಿಲ್‌ ಮೊದಲವಾರ ನಗರಕ್ಕೆ ಸೀಮಿತವಾಗಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಹಳ್ಳಿಗಳಲ್ಲೂ ಸೋಂಕು ಹರಡಲು ಕಾರಣವಾಯಿತು.

ಮೊದಲ ಹಂತವಾಗಿ ತಹಶೀಲ್ದಾರ್‌ ಎಂ. ಸಿದ್ದೇಶ, ತಾಲೂಕು ವೈದ್ಯಾಧಿಕಾರಿ ಡಾ| ಆನಂದ ಗೋಟೂರು, ತಾಪಂ ಇಒ ಕೆ. ತಿಮ್ಮಪ್ಪ, ನರೇಗಾ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ್‌, ಜಂಟಿ ಕಾರ್ಯಾಚರಣೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅನುಮತಿ ಇಲ್ಲದ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಕೋವಿಡ್‌ ನಿಯಮಾವಳಿ ಉಲ್ಲಂಘನೆ ಪ್ರಕರಣ ದಾಖಲಿಸಿದ್ದರಿಂದ ನಕಲಿ ವೈದ್ಯರ ಹಾವಳಿ ನಿಯಂತ್ರಿಸಲು ಸಾಧ್ಯವಾಯಿತು.

ನಂತರ ಕೋವಿಡ್‌ ಸೋಂಕಿತರು ಮನೆ ಆರೈಕೆಯಲ್ಲಿದ್ದವರನ್ನು ಕೋವಿಡ್‌ ಕಾಳಜಿ ಕೇಂದ್ರಗಳಿಗೆ ಬಲವಂತವಾಗಿ ದಾಖಲಿಸಲಾಯಿತು. ಈ ಮಹತ್ವದ ಬೆಳವಣಿಗೆಯಿಂದ ತಾಲೂಕಿನ 177 ಗ್ರಾಮಗಳ ಪೈಕಿ 10 ಗ್ರಾಮಗಳು ಕೊರೊನಾ ಮುಕ್ತವಾಗಿವೆ.

ಯಾವ್ಯಾವ ಗ್ರಾಮಗಳು?: ಹನುಮಗಿರಿ, ಚಂದ್ರಗಿರಿ, ಗುಡದೂರಕಲ್ಲ, ಬಿಸನಾಳ, ಕನ್ನಾಳ, ಗಂಗನಾಳ, ಹಡಗಲಿ, ಮುಕರ್ತಿನಾಳ, ರ್ಯಾವಣಕಿ ಹಾಗೂ ಎಂ. ಕಲಕೇರಿ ಗ್ರಾಮಗಳು ಕೊರೊನಾ ಮುಕ್ತವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ನಿಯಂತ್ರಿಸದೇ ಇದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂಬುದನ್ನು ಅರಿತ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ನೇತೃತ್ವದಲ್ಲಿ ಪಿಡಿಒ, ತಾಪಂ ಇಒ ಟಾಸ್ಕ್ ಫೋರ್ಸ್‌ ಸಭೆಗಳನ್ನು ಮೇಲಿಂದ ಮೇಲೆ ನಡೆಸಲಾಯಿತು. ಬಹುತೇಕ ಗ್ರಾಮಗಳಲ್ಲಿ ಸ್ಯಾನಿಟೈಸ್‌ ಮಾಡಲಾಯಿತು. ಗ್ರಾಮದಲ್ಲಿ ಗುಂಪು ಸೇರದಂತೆ, ಕಡ್ಡಾಯವಾಗಿ ಮಾಸ್ಕ್ ಹಾಕುವಂತೆ ಜಾಗೃತಿ ಮೂಡಿಸಲಾಗಿದೆ.

Advertisement

ಪಿಡಿಒ, ಗ್ರಾಪಂ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆರು ಸಮನ್ವಯತೆ ಕೆಲಸ, ಗ್ರಾಪಂ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ. ತಾಲೂಕಿನ 16 ವಸತಿ ನಿಲಯದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆದು ಚಿಕಿತ್ಸೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 21 ಗ್ರಾಮಗಳು ಕೊರೊನಾ ಮುಕ್ತವಾಗಿ ಶೂನ್ಯಕ್ಕಿಳಿದಿವೆ. ಇದೇ ಸಹಕಾರ ನೀಡಿದರೆ ಇಡೀ ತಾಲೂಕು ಕೊರೊನಾ ಮುಕ್ತ ಆಗುವುದರಲ್ಲಿ ಸಂದೇಹವಿಲ್ಲ. -ವೆಂಕಟೇಶ ವಂದಾಲ, ನರೇಗಾ ಸಹಾಯಕ ನಿರ್ದೇಶಕ

 

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next