Advertisement

10ರೊಳಗೆ ರೈಲ್ವೆ ಮೇಲ್ಸೇತುವೆ ಸಭೆ: ಸಚಿವರ ಭರವಸೆ

01:22 PM Feb 28, 2017 | Team Udayavani |

ದಾವಣಗೆರೆ: ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸಂಬಂಧ ಮಾ.10ರ ಒಳಗೆ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. ದಶಕಗಳಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಆಗುತ್ತಿರುವ ರೈಲ್ವೆ ಗೇಟ್‌ ಸಮಸ್ಯೆ ನಿವಾರಣೆಗೆ ಸೋಮವಾರ ಗೇಟ್‌ ಬಳಿಯೇ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ. ಧರಣಿನಿರತ ಜೆಡಿಎಸ್‌ ಕಾರ್ಯಕರ್ತರ ಮನವಿ ಸೀÌಕರಿಸಿ, ಮಾತನಾಡಿದ ಸಚಿವರು, ಇಲ್ಲಿ ನನ್ನ ಜಾಗ ಇದೆ.

Advertisement

ಅದೇ ಕಾರಣಕ್ಕೆ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ನಗರದ ಜನತೆಗೆ ಒಳಿತಾಗುವುದಾದರೆ ನಾನು ನನ್ನ ಜಾಗ ಬಿಟ್ಟುಕೊಡಲು ಸಿದ್ಧನಿದ್ದೇನೆ. ಆದರೆ, ರೈಲ್ವೆ ಇಲಾಖೆ ಇದುವರೆಗೂ ನಿರ್ಮಾಣ ಮಾಡಿರುವ ಬಹುತೇಕ ಬ್ರಿಡ್ಜ್ಗಳು ಸಮಸ್ಯೆ ಉಂಟುಮಾಡಿವೆ. ಇದೇ ಕಾರಣಕ್ಕೆ ಕಾಮಗಾರಿ ವಿಳಂಬ ಆಗುತ್ತಿದೆ ಎಂದರು. ಇದುವರೆಗೆ ರೈಲ್ವೆ ಇಲಾಖೆಯಿಂದ ನೀಡಿರುವ ನೀಲ ನಕಾಶೆಗಳು ಸಮಸ್ಯೆ ಪರಿಹಾರಕ್ಕೆ ಪೂರಕವಾಗಿಲ್ಲ.

ಬದಲಿಗೆ ಇನ್ನೊಂದು ರೀತಿಯ ಸಮಸ್ಯೆ ಉಂಟುಮಾಡುವ ರೀತಿಯಲ್ಲಿವೆ. ಇದನ್ನು ಮನಗಂಡೇ ಉತ್ತಮ ಯೋಜನೆ ರೂಪಿಸಲು ತಿಳಿಸಲಾಗಿತ್ತು. ಆದರೆ, ಇಲಾಖೆಯ ಅಧಿಕಾರಿಗಳು ಕೊಟ್ಟ ನೀಲ ನಕಾಶೆಯಲ್ಲಿಯೇ ಒಂದನ್ನು ಒಪ್ಪಿಕೊಳ್ಳಿ ಎಂಬುದಾಗಿ ಹೇಳುತ್ತಿದ್ದಾರೆ. ಇದು ಸಾಧ್ಯವಿಲ್ಲ. ಮೇಲ್ಸೇತುವೆ ಸಂಬಂಧ ರೈಲ್ವೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾ. 10ರ ಒಳಗೆ ಸಭೆ ನಡೆಸುವೆ ಎಂದು ಅವರು ಭರವಸೆ ನೀಡಿದರು. 

ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್‌ ಯುವ ಘಟಕದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್‌, ಹಲವು ದಶಕಗಳಿಂದಲೂ ಸಾರ್ವಜನಿಕರಿಗೆ ಈ ರೈಲ್ವೆ ಗೇಟ್‌ ಸಮಸ್ಯೆ ಕಾಡುತ್ತಿದೆ. ಹಳೆ ಭಾಗದ ಜನರು ಈ ಭಾಗಕ್ಕೆ ಬರಲು ಪ್ರತಿದಿನ ಪರದಾಡಬೇಕಿದೆ. ದಿನಕ್ಕೆ 30ಕ್ಕೂ ಹೆಚ್ಚು ಬಾರಿ ರೈಲ್ವೆ ಗೇಟ್‌ ಮುಚ್ಚುವುದರಿಂದ ವಾಹನ ಸವಾರು ಕಿರಿಕಿರಿ ಅನುಭವಿಸುತ್ತಾರೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಹಲವು ಬಾರಿ ಹೋರಾಟ ನಡೆಸಲಾಗಿದೆ.

ಆದರೆ, ಯಾರೂ ಸಹ ಸ್ಪಂದಿಸಲ್ಲ ಎಂದು ಅವರು ಹೇಳಿದರು. ಇಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಲು ಕೇಂದ್ರ ರೈಲ್ವೆ ಇಲಾಖೆ 37 ಕೋಟಿ ರೂ. ಮಂಜೂರುಮಾಡಿ ನಾಲ್ಕು ವರ್ಷ ಕಳೆದಿವೆ. ಆದರೆ, ಕಾಮಗಾರಿ ಮಾತ್ರ ಇದುವರೆಗೆ ಆರಂಭವೇ ಆಗಿಲ್ಲ. ರಾಜ್ಯ ಸರ್ಕಾರ ತನ್ನದೇನು ತಪ್ಪಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿದರೆ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದೆ. ನಿಜಕ್ಕೂ ಸಮಸ್ಯೆ ಯಾರದ್ದು ಎಂಬುದು ತಿಳಿಯಬೇಕು.

Advertisement

ಜೊತೆಗೆ ಶೀಘ್ರ ಬ್ರಿಡ್ಜ್ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು. ರೈಲ್ವೆ ಹೋರಾಟಗಾರ ಎಂ.ಎಸ್‌.ಕೆ. ಶಾಸ್ತ್ರಿ, ಜೆಡಿಎಸ್‌ನ ಸಂಗನಗೌಡ, ಶ್ರೀನಿವಾಸ್‌ ಬಸಾಪತಿ, ಟಿ. ಅಸYರ್‌, ಸಾದಿಕ್‌, ಟಿ. ಮೊಹಮ್ಮದ್‌ ಗೌಸ್‌ ಪೀರ್‌, ಅನೀಸ್‌ ಪಾಷ, ಬಾತಿ ಶಂಕರ್‌, ಕೆ.ಎ. ಪಾಪಣ್ಣ, ಕೆ. ದಾದಾಪೀರ್‌, ಗುರುಪಾದಯ್ಯ ಮಠದ್‌ ಇತರೆ ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಧರಣಿಗೂ ಮುನ್ನ ಕಾರ್ಯಕರ್ತರು ಜಯದೇವ ವೃತ್ತದಿಂದ ಮೆರವಣಿಗೆ ನಡೆಸಿದರು.  

Advertisement

Udayavani is now on Telegram. Click here to join our channel and stay updated with the latest news.

Next