Advertisement
ಈ ಬಾರಿ ವಿಶ್ವಕಪ್‌ಗಾಗಿ ಭಾರತ ಅತ್ಯಂತ ಸಮತೋಲಿತ ತಂಡವನ್ನು ರಚನೆ ಮಾಡಿತ್ತು. ಎಲ್ಲಾ ಪಂದ್ಯಗಳಲ್ಲೂ ಐವರು ಬ್ಯಾಟರ್‌ಗಳು, ಮೂವರು ಆಲ್‌ರೌಂಡರ್‌ಗಳು ಮತ್ತು ಮೂವರು ಬೌಲರ್‌ಗಳಿರುವಂತೆ ತಂಡವನ್ನು ರಚನೆ ಮಾಡಲಾಗಿತ್ತು. ಇದು ಎಲ್ಲಾ ಪರಿಸ್ಥಿತಿಗಳನ್ನು ಭಾರತ ತಂಡ ಉತ್ತಮ ಪ್ರದರ್ಶನ ನೀಡಲು ನೆರವಾಯಿತು.
Related Articles
Advertisement
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಡೀ ಪಂದ್ಯಾವಳಿಯಲ್ಲಿ ವೈಫಲ್ಯ ಅನುಭವಿಸಿದರೂ ಇತರ ಬ್ಯಾಟರ್‌ಗಳು ನಿರ್ಣಾಯಕ ಪಂದ್ಯಗಳಲ್ಲಿ ಮಿಂಚಿದರು. ರೋಹಿತ್ ಶರ್ಮ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ರನ್ ಗಳಿಸಿದ್ದು ಭಾರತ ಗೆಲುವಿಗೆ ಕಾರಣವಾಯಿತು.
ಮೂವರು ಸ್ಪಿನ್ನರ್‌ಗಳು
ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದ ಅಮೆರಿಕ, ವಿಂಡೀಸ್ ಪಿಚ್‌ಗಳಲ್ಲಿ ಭಾರತ ತಂಡ ನಿರಂತರವಾಗಿ ಮೂವರು ಸ್ಪಿನ್ನರ್‌ಗಳನ್ನು ಆಡಿಸಿತು. ಹೀಗಾಗಿ ಮಧ್ಯದ ಓವರ್‌ಗಳಲ್ಲಿ ಎದುರಾಳಿ ತಂಡ ರನ್ ಗಳಿಸಲಾಗದೇ ಪರದಾಡಿತು. ಅಲ್ಲದೇ ಸಾಕಷ್ಟು ವಿಕೆಟ್ ಕಳೆದುಕೊಂಡವು.
ಇದನ್ನೂ ಓದಿ:T20 world cup: ವಿಶ್ವಕಪ್ ದಿಗ್ವಿಜಯ… ಅಂದು – ಇಂದು
ಬೌಲಿಂಗ್‌ಗೆ ನೆರವಾದ ಪಿಚ್
ಭಾರತದ ಬೌಲಿಂಗ್ ಕಾಂಬಿನೇಶನ್‌ಗೆ ತಕ್ಕಂತೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಪಿಚ್‌ಗಳು ನೆರವು ಒದಗಿಸಿದವು. ಇಲ್ಲಿನ ನಿಧಾನಗತಿ ಹಾಗೂ ತಿರುವಿನ ಲಾಭ ಪಡೆದುಕೊಂಡ ಭಾರತದ ಬೌಲರ್‌ಗಳು ಇತರ ತಂಡಗಳನ್ನು ಕಾಡಿದರು. ಇದು ಹಲವು ಪಂದ್ಯಗಳನ್ನು ಗೆಲ್ಲಲು ಭಾರತಕ್ಕೆ ನೆರವಾಯಿತು.
ಪಾಕ್ ವಿರುದ್ಧ ಗೆದ್ದ ವಿಶ್ವಾಸ
ಸಾಂಪ್ರಾದಾಯಿಕ ಎದುರಾಳಿ ಎಂದೇ ಕರೆಸಿಕೊಳ್ಳುವ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ಗೆಲುವು ತಂಡಕ್ಕೆ ಭಾರಿ ಆತ್ಮವಿಶ್ವಾಸವನ್ನು ತುಂಬಿತು. ನ್ಯೂಯಾರ್ಕ್‌ನ ನಾಸೌ ಮೈದಾನದಲ್ಲಿ 119 ರನ್‌ಗಳನ್ನು ರಕ್ಷಿಸಿಕೊಂಡ ಭಾರತ ಪಾಕಿಸ್ತಾನಕ್ಕೆ 20 ಓವರ್‌ಗಳಲ್ಲಿ ನೀಡಿದ್ದು ಕೇವಲ 113 ರನ್ ಮಾತ್ರ.
ಆಸೀಸ್ ವಿರುದ್ಧದ ಜಯ
ಸೂಪರ್-8ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದರೆ ಟೂರ್ನಿಯಿಂದ ಹೊರಬೀಳುವ ಅಪಾಯ ಎದುರಾಗುತ್ತಿತ್ತು.
ಆದರೆ ಭಾರತ ಸಾಧಿಸಿದ ಬೃಹತ್ ಗೆಲುವಿನ ಕಾರಣದಿಂದಾಗಿ ಆಸ್ಟ್ರೇಲಿಯಾ ಪಂದ್ಯಾವಳಿಯಿಂದ ಹೊರಬಿದ್ದಿತು. ಇದು ಭಾರತಕ್ಕೆ ಲಾಭವಾಗಿ ಪರಿಣಮಿಸಿತು.
ಇಂಗ್ಲೆಂಡ್ ವಿರುದ್ಧದ ಜಯ
ಕಳೆದ ಆವೃತ್ತಿಯ ಸೆಮಿಫೈನಲ್ ಸೋಲಿಗೆ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ, ಹಾಲಿ ಚಾಂಪಿಯನ್ನರನ್ನು ಪ್ರತಿಕೂಲ ಹವಾಮಾನದ ನಡುವೆಯೂ ಸೆಮಿಫೈನಲ್‌ನಲ್ಲಿ ಹೊಸಕಿಹಾಕಿತು. ಮಳೆ ಅಡ್ಡಿ ಪಡಿಸುತ್ತಿದ್ದ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ್ದು, ಭಾರತವನ್ನು ಫೈನಲ್‌ಗೇರಿಸಿತು.
ಸಮಯಕ್ಕೆ ಒಗ್ಗಿಕೊಂಡ ತಂಡ
ವಿಶ್ವಕಪ್ ಪಂದ್ಯಾವಳಿಯ ಸಮಯದಲ್ಲಿ ಭಾರತ ತಂಡ ಸಮಯಕ್ಕೆ ತಕ್ಕಂತೆ ಒಗ್ಗಿಕೊಂಡಿತು. ಎಲ್ಲಾ ಆಟಗಾರರು ಲಯ ಕಂಡುಕೊಂಡರು. ಹೀಗಾಗಿ ಕೊಹ್ಲಿ ವಿಫಲವಾದರೂ ಭಾರತ ತಂಡ ವಿಫಲವಾಗಲಿಲ್ಲ. ಪರಿಸ್ಥಿತಿಗೆ ಬಹುಬೇಗ ಹೊಂದಿಕೊಂಡ ಬೌಲರ್‌ಗಳು ನಿಗದಿತವಾಗಿ ವಿಕೆಟ್ ಪಡೆದುಕೊಂಡರು.
ಹಳೆಯ ನೋವ ಮರೆವ ಛಲ
ಕಳೆದೆರಡು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ತಂಡ ಅನುಭವಿಸಿದ್ದ ಸೋಲಿನ ಕಹಿನೆನಪನ್ನು ಅಳಿಸಲೇ ಬೇಕು ಎಂಬ ಛಲ ಎಲ್ಲಾ ಆಟಗಾರರಲ್ಲೂ ಇತ್ತು. ಏಕದಿನ ವಿಶ್ವಕಪ್ಪನ್ನೂ ಫೈನಲ್‌ನಲ್ಲಿ ಕಳೆದುಕೊಂಡಿದ್ದ ನೆನಪು ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ ಎಲ್ಲಾ ಆಟಗಾರರು ಛಲತೊಟ್ಟು ಆಟವಾಡಿದರು.