Advertisement

ಸನ್ನಢತೆ ಆಧಾರದಲ್ಲಿ 10 ಕೈದಿ ಬಿಡುಗಡೆ

11:33 AM Oct 06, 2018 | Team Udayavani |

ಮೈಸೂರು: 150ನೇ ವರ್ಷದ ಗಾಂಧಿಜಯಂತಿ ಹಿನ್ನೆಲೆಯಲ್ಲಿ ಸನ್ನಡೆತೆ ಆಧಾರದಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದ ಹತ್ತು ಮಂದಿ ಕೈದಿಗಳಿಗೆ ಶನಿವಾರ ಬಿಡುಗಡೆ ಭಾಗ್ಯ ಲಭಿಸಿತು. 

Advertisement

ಅರಕಲಗೂಡು ತಾಲೂಕು ವಡ್ಡರಹಳ್ಳಿಯ ಈರಪ್ಪ, ನೆಲಮನೆ ಗ್ರಾಮದ ತಿಮ್ಮೇಗೌಡ, ಕೊಡಗು ಜಿಲ್ಲೆಯ ಮೆಣಸ ಗ್ರಾಮದ ನಾಗರಾಜ, ನಲ್ಕೇರಿ ಗ್ರಾಮದ ಎಚ್‌.ಪಿ.ಶಿವಕುಮಾರ್‌, ನಂಜನಗೂಡಿನ ಚಂದ್ರಶೇಖರ್‌, ಚಿಕ್ಕಮಗಳೂರಿನ ಹಳಗಂಗೂರಿನ ಚೆನ್ನಪ್ಪ, ಅಪ್ಪಣ್ಣ, ಹೂಟಗಳ್ಳಿ ನಿವಾಸಿ ಶಿವಲಿಂಗ, ಬೇಲೂರಿನ ರಾಜು, ತಮಿಳುನಾಡಿನ ಸತ್ಯಮಂಗಲದ ದೇವರಾಜು ಅವನ್ನು ಸರ್ಕಾರದ ಅನುಮತಿ ಮೇರೆಗೆ ಬಿಡುಗಡೆ ಮಾಡಲಾಯಿತು. 

ಸನ್ನಢತೆಯ ಆಧಾರದಲ್ಲಿ ಬಿಡುಗಡೆಯಾದ ಕೈದಿಗಳಲ್ಲಿ ಹೆಚ್ಚಿನವರು ಜೈಲಿನಲ್ಲಿ ಗರಿಷ್ಠ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಸರ್ಕಾರದ ಆದೇಶದಂತೆ ಶೇ.66 ಶಿಕ್ಷೆಯನ್ನು ಪೂರ್ಣಗೊಳಿಸಿದ ಕೈದಿಗಳಿಗೆ ಬಿಡುಗಡೆ ಮಾಡಲಾಯಿತು. 

ಕೈದಿಗಳಿಂದ ಪಾವತಿಸಬೇಕಿದ್ದ 20 ಸಾವಿರ ರೂ. ದಂಡದ ಮೊತ್ತವನ್ನು ಕಾರಾಗೃಹಗಳ ಸಚಿವಾಲಯದಿಂದ ಪಾವತಿಸಲಾಯಿತು. ಕೈದಿಗಳ ಬಿಡುಗಡೆ ವೇಳೆ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಕೆ.ವಂಟಿಗೋಡಿ, ಕಾರಾಗೃಹ ಅಧೀಕ್ಷಕ ಆನಂದ ರೆಡ್ಡಿ ಇನ್ನಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next