Advertisement
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ| ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕಲಬುರಗಿ, ಬಳ್ಳಾರಿ ಅರಣ್ಯ ವೃತ್ತಗಳ ಕೃಷಿ ಅರಣ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 8ನೇ ತರಗತಿ ಇದ್ದಾಗ ಕನಿಷ್ಠ 10 ಗಿಡಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಸಂರಕ್ಷಿಸಿ ಬೆಳೆಸಿದರೆ ಎಸ್‌ಎಸ್ ಎಲ್‌ಸಿಯಲ್ಲಿ ಶೇ.10 ಕೃಪಾಂಕ ಅಂಕ ನೀಡುವ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಯೋಜನೆಯನ್ನು ಜಾರಿಗೆ ತಂದಲ್ಲಿ ಅರಣ್ಯೀಕರಣ ಹೆಚ್ಚಳವಾಗಲು ಸಾಧ್ಯವಾಗುತ್ತದೆ. ಈಗಾಗಲೇ ಎಕರೆ ಭೂಮಿಯ ಬದುವಿನಲ್ಲಿ ಕನಿಷ್ಠ 20 ಗಿಡಗಳನ್ನಾದರೂ ಬೆಳೆಯ ಬೇಕೆಂಬುದರ ಕುರಿತು ಯೋಜನೆ ರೂಪಿಸಲಾಗಿದ್ದು, ಒಟ್ಟಾರೆ ಅರಣ್ಯೀಕರಣ ಹೆಚ್ಚಳಕ್ಕೆ ಪರಿಣಾಮಕಾರಿ ಯೋಜನೆಗಳು ಕಾರ್ಯಾನುಷ್ಠಾನ ಅಗತ್ಯವಿದೆ ಎಂದರು.