Advertisement

Bengaluru: ಪರಿಚಯಸ್ಥರ ಮನೆಯಲ್ಲಿ 10 ಲಕ್ಷ ರೂ. ಚಿನ್ನ ಕದ್ದಳು!

02:25 PM Aug 23, 2024 | Team Udayavani |

ಬೆಂಗಳೂರು: ಪರಿಚಯಸ್ಥ ಮನೆಯಲ್ಲೇ ಕಳವು ಮಾಡಿದ್ದ ಮಹಿಳೆಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೊತ್ತನೂರು ನಿವಾಸಿ ತಸ್ಲಿಮಾ ಭಾನು(25) ಬಂಧಿತೆ.

ಆಕೆಯಿಂದ 10 ಲಕ್ಷ ರೂ. ಮೌಲ್ಯದ 142 ಗ್ರಾಂ ಚಿನ್ನಾಭರಣ, 20 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ ಇತ್ತೀಚೆಗೆ ಮೊಹಮ್ಮದ್‌ ಅಬ್ರಾರ್‌ ಎಂಬುವರ ಮನೆಯ ಬೀರುವಿನಲ್ಲಿ ಇಟ್ಟಿದ್ದ 162 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ರೂ. ನಗದು ಕಳವು ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅನುಮಾನದ ಮೇರೆಗೆ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

ದೂರುದಾರ ಮೊಹಮ್ಮದ್‌ ಅಬ್ರಾರ್‌ಗೆ, ಆರೋಪಿತೆ ಮಹಿಳೆಯ ಪರಿಚಯಸ್ಥರಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣದ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಕಳವು ಮಾಡಿದ್ದಾಳೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next