ಕಲಬುರಗಿ: ಬಕ್ರಿದ್ ಹಬ್ಬದ ಪ್ರಯುಕ್ತ ಮಹಾಪೌರ ಶರಣುಮೋದಿ ಕಸಾಯಿಖಾನೆ ಸ್ವತ್ಛತೆಗೆ 10 ಲಕ್ಷ ರೂ. ಖರ್ಚು ಮಾಡಲು ನಿರ್ಧರಿಸಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಬುಧವಾರ ಬಿಜೆಪಿ ಉತ್ತರ ಮಂಡಲದ ಸದಸ್ಯರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಪಾಲಿಕೆ ಆಯುಕ್ತ ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಿದರು. ಬಕ್ರಿದ್ ಹಬ್ಬದ ಅಂಗವಾಗಿ ಕಸಾಯಿಖಾನೆಗಳಲ್ಲಿ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ 10 ಲಕ್ಷ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿರುವ ಪಾಲಿಕೆ ಮಹಾಪೌರರು ಒಂದು ಸಮುದಾಯದ ಜನರ ಸಂತೋಷಕ್ಕಾಗಿ ಮತ್ತು ಮಹಾಪೌರರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಋಣತೀರಿಸುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಬಿ.ಜಿ. ಪಾಟೀಲ, ಬಿಜೆಪಿ ಉತ್ತರ ಮಂಡಲ ಚನ್ನವೀರ ಲಿಂಗನವಾಡಿ, ಸುಭಾಷ ಬಿರಾದಾರ, ಶಿವಶರಣಪ್ಪ ನಿಗ್ಗುಡಗಿ, ಆರ್.ಎಸ್. ಪಾಟೀಲ, ದಯಾಘನ ಧಾರವಾಡಕರ್, ರಾಜು ವಾಡೀಕರ್, ಉಮೇಶ ಪಾಟೀಲ ಮತ್ತಿತರರು ಈ ಸಂದರ್ಭದಲ್ಲಿದ್ದರು.