ವಿಜಯಪುರ: ವೆಂಕಟೇಶ ನಗರ, ಲಕ್ಷ್ಮೀ ನಗರ ಮೊದಲಾದ ಬಡಾವಣೆಗಳಿಗೆ ಅನುಕೂಲವಾಗಲು ಚರಂಡಿ ಕಾಮಗಾರಿ ಕೈಗೊಳ್ಳಲು 10 ಲಕ್ಷ ರೂ. ಅನುದಾನ ಬಿಡುಗಡೆ ಭರವಸೆಯನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿದರು.
ನಗರದ ವಾರ್ಡ್ ನಂ. 21ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 10 ಲಕ್ಷ ರೂ. ಅನುದಾನದಡಿ ತುರ್ತು ಚರಂಡಿ ಕಾಮಗಾರಿಗೆ ಮಂಜೂರು ಮಾಡಲು ಮಹಾನಗರ ಪಾಲಿಕೆ ಅಭಿಯಂತರರಿಗೆ ಸೂಚನೆ ನೀಡಿದರು. ನಗರದ ಎಲ್ಲ ವಾರ್ಡ್‌ಗಳಿಗೆ ಕುಡಿಯುವ ನೀರು ಒಳ ಚರಂಡಿ ಸಿಸಿ ರಸ್ತೆಗಳನ್ನು ಸುಸಜ್ಜಿತತವಾಗಿ ರೂಪಿಸಲಾಗುತ್ತಿದೆ ಎಂದರು.
ವೀರಶೈವ ಲಿಂಗಾಯತ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಚನ್ನಬಸಯ್ಯ ಹಿರೇಮಠ ನಿವಾಸಿಗಳ ಬೇಡಿಕೆಗಳನ್ನು ಶಾಸಕರ ಮುಂದಿರಿಸಿ, ಲಕ್ಷ್ಮೀ ನಗರದ ರಿಂಗ್ ರಸ್ತೆ ಹತ್ತಿರ ಸಿಸಿ ರಸ್ತೆ ತುಂಬೆಲ್ಲ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬನ್ನಿ ಮಹಾಂಕಾಳಿ ಕಟ್ಟಿ ಹತ್ತಿರ ಕೆಇಬಿ ಟಿಸಿ ಇದ್ದು, ಟಿಸಿ ಸುತ್ತಲು ನೀರು ನಿಲ್ಲುತ್ತಿದ್ದು ಅಪಾಯಕಾರಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಮಹಾಲಕ್ಷ್ಮೀ ಪ್ರಾಥಮಿಕ ಶಾಲೆ ಅಧ್ಯಕ್ಷ ಬಸವರಾಜ ನವಲಿ ಮಾತನಾಡಿ, ಈಗಾಗಲೇ ವಾರ್ಡ್‌ನಲ್ಲಿ ಹಲವಾರು ಪ್ರಗತಿ ಕಾಮಗಾರಿಗಳು ಆರಂಭಗೊಂಡಿರುವುದು ಸಂತೋಷ ತಂದಿದೆ ಎಂದು ನಿವಾಸಿಗಳ ಪರವಾಗಿ ಮಾತನಾಡಿದರು.
ಬಿಜೆಪಿ ಯುವ ನಾಯಕ ಸಂತೋಷ ಕುಮಾರ ತಳಕೇರಿ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಗುರುದೇವ ಅಂಗಡಿ, ಎಂ.ಎಸ್. ಮಠ, ಪ್ರವೀಣ ಕಿಚಡಿ, ಶಿವಾನಂದ ಶಾಸ್ತ್ರಿಗಳು, ರಮೇಶ ಮುಳವಾಡ, ಆರ್.ಬಿ. ಮಠ, ಸಿ.ಜಿ. ಡೋಮನಾಳ, ಅಶೋಕ ಗುಂಡಳ್ಳಿ, ಗಿರೀಶ ಚಿಮ್ಮಲಗಿ, ಈಶ್ವರ ಹೂಗಾರ,ದಿವಾಕರ ಬಡಿಗೇರ, ಶಂಕುತಲಾ ಅಂಗಡಿ, ಸಂಗೀತಾ ನವಲಿ, ವಿಜಯಲಕ್ಷ್ಮೀ ಗಂಜಾಳ, ಬೋರಮ್ಮ ಮಠ, ಶೈಲಮಠ, ಮಲ್ಲಮ್ಮ ಏವೂರ, ಸವಿತಾ ಜಗಶೆಟ್ಟಿ, ಮಹಾದೇವಿ ಸಿಂದಗಿ, ಭಾರತಿ ನಾವಿ ಹಡಪದ ಇದ್ದರು.