Advertisement

Banks 10 ವರ್ಷದಲ್ಲಿ 10 ಲಕ್ಷ ಕೋಟಿ ಸಾಲ ವಸೂಲಿ: ನಿರ್ಮಲಾ ಸೀತಾ ರಾಮನ್‌

12:25 AM Jun 01, 2024 | Team Udayavani |

ಹೊಸದಿಲ್ಲಿ: 2014ರಿಂದ 2023ರ ವರೆಗೆ ಭಾರತೀಯ ಬ್ಯಾಂಕ್‌ಗಳು ಬರೋಬ್ಬರಿ 10 ಲಕ್ಷ ಕೋಟಿ ರೂ. ಕೆಟ್ಟ ಸಾಲಗಳನ್ನು ವಸೂಲಿ ಮಾಡಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌ ಹೇಳಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿನ ಬದಲಾವಣೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಜಾರಿ ನಿರ್ದೇಶನಾಲಯವು 1,105 ಬ್ಯಾಂಕ್‌ ವಂಚನೆ ಪ್ರಕರಣಗಳನ್ನು ತನಿಖೆ ಮಾಡುತ್ತಿದೆ. ಇದರಲ್ಲಿ 64,920 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೇ ಇತ್ತೀಚೆಗೆ ಭಾರತದ ಬ್ಯಾಂಕಿಂಗ್‌ ವಲಯ ಮತ್ತೂಂದು ಮೈಲುಗಲ್ಲು ಸಾಧಿಸಿದ್ದು, ಬ್ಯಾಂಕಿಂಗ್‌ ವಲಯದ ನಿವ್ವಳ ಲಾಭ 3 ಲಕ್ಷ ಕೋಟಿ ರೂ. ಮೀರಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next