Advertisement
ಜೂನಿಯರ್ ಕಾಲೇಜು ಮೈದಾನದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಎಸ್‌ಐಓ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ದೇಶಪ್ರೇಮಿ ವಿದ್ಯಾರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
Related Articles
Advertisement
ದೇಶದ ಜನತೆಗೆ ಅತೀಯಾದ ಭರವಸೆ ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಮಂತ್ರಿ ಮೋದಿಯವರು ದೇಶದ ಆಸ್ತಿಯನ್ನು ತನ್ನ ಸ್ನೇಹಿತರಾದ ಆದಾನಿ, ಅಂಬಾನಿ ಸೇರಿ ಕೆಲವರಿಗೆ ಮಾರಾಟ ಮಾಡುತ್ತಿದ್ದಾರೆ. ಜಮ್ಮುಕಾಶ್ಮೀರ ಹಾಗೂ ಲಡಾಖ್ ಜನತೆಗೆ ಸ್ವಂತ ರಾಜ್ಯ ಹಾಗೂ ಎರಡು ಲೋಕಸಭಾ ಕ್ಷೇತ್ರ ನೀಡುವುದಾಗಿ ಭರವಸೆ ನೀಡಿ ಇಡೀ ಪ್ರದೇಶದಲ್ಲಿ ಕರ್ಪ್ಯೂ ವಿಧಿಸಿ ಜನರನ್ನು ಗೃಹಬಂಧನದಲ್ಲಿರಿಸಿ ತನ್ನ ಗುಜರಾತಿ ಗೆಳೆಯರಿಗೆ ಗಣಿಗಾರಿಕೆ ಮಾಡಲು ಲೈಸೆನ್ಸ್ ನೀಡಿದ್ದಾರೆ. ಹಿಮಾಲಯ ಪ್ರದೇಶದಲ್ಲಿ ಮಳೆ ಕಡಿಮೆಯಾಗುತ್ತದೆ. ಮಂಜು ಕರಗಿ ನೀರಾಗಿ ಈ ಪ್ರದೇಶವನ್ನು ತಂಪಾಗಿರಿಸಿದ್ದು ಗಣಿಗಾರಿಕೆಯಿಂದ ಕಾಶ್ಮೀರ ಮಲೀನವಾಗಲಿದ್ದು ಇದನ್ನು ವಿರೋಧಿಸಿ ಲಡಾಖ್ ನಲ್ಲಿ ಹಲವು ತಿಂಗಳಿಂದ ಧರಣಿ ನಡೆಸುತ್ತಿರುವ ವಾನಚುಕ್ ಹಾಗೂ ಅವರ ಬೆಂಬಲಿಗರನ್ನು ದೇಶ ದ್ರೋಹಿಗಳು ಎಂದು ಮೋದಿ ಕರೆಯುತ್ತಿದ್ದಾರೆ. ಇದರಿಂದ ಯುವಕರಿಗೆ ಉದ್ಯೋಗ ನೀಡದ, ರೈತರ ಬೆಳೆಗೆ ಆಧುನಿಕ ದರ ನೀಡದ, ಕಾರ್ಮಿಕರಿಗೆ ಸೇವಾ ಭದ್ರತೆ ನೀಡದ ದೇಶದ ಗಡಿ ಕಾಯುವಲ್ಲಿ ವಿಫಲರಾಗಿರುವ ಕೇಂದ್ರದ ಬಿಜೆಪಿ ಸರಕಾರವನ್ನು ಕಿತ್ತು ಹಾಕಬೇಕು.ಪುನಃ ಮುಂಬರುವ ಸರಕಾರಕ್ಕೆ ಸಂಘಟನೆಗಳು ವಿಪಕ್ಷಗಳಂತೆ ಕಾರ್ಯ ನಿರ್ವಹಿಸಬೇಕೆಂದರು.
ಕಾರ್ಯಕ್ರದಲ್ಲಿ ರೈತ ಹೋರಾಟಗಾರ ಅವತಾರ ಸಿಂಗ್, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಕೆವಿಎಸ್ ರಾಜ್ಯಾಧ್ಯಕ್ಷ ಸರೋವರ್ ಬೆಂಕಿಕೇರಿ, ಕಾರ್ಯದರ್ಶಿ ದುರುಗೇಶ ಬರಗೂರು, ಎಸ್‌ಐಓ ರಾಜ್ಯಾಧ್ಯಕ್ಷ ಜಿಷಾನ್, ವಿದ್ಯಾರ್ಥಿ ಮುಖಂಡರಾದ ಪ್ರಗತಿ, ಬಾಲಾಜಿ ಕಾಂಬ್ಳೆ, ಎಸ್‌ಐಓ ಕಾರ್ಯದರ್ಶಿ ಮೊಹನದ್ ಪೀರ್ ಸೇರಿ ಅನೇಕರಿದ್ದರು.