Advertisement

Ayodhya: 10 ಕಿ.ಮೀ. ದೂರಕ್ಕೆ 470 ಸೋಲಾರ್‌ ಲೈಟ್‌ ಅಳವಡಿಕೆ: ಗಿನ್ನೆಸ್‌ ದಾಖಲೆಗೆ ಸಿದ್ಧತೆ

01:00 AM Jan 11, 2024 | Team Udayavani |

ಅಯೋಧ್ಯಾ: ಸರಯೂ ನದಿ ತೀರದಲ್ಲಿ ಪ್ರತೀ ದೀಪಾವಳಿ ವೇಳೆ ಹಣತೆಗಳನ್ನು ಬೆಳಗಿಸಿ ವಿಶ್ವದಾಖಲೆ ಮಾಡುವ ಉ.ಪ್ರ. ಸರಕಾರ ಮತ್ತೂಂದು ದಾಖಲೆಗೆ ಸಿದ್ಧವಾಗುತ್ತಿದೆ. ಅಯೋಧ್ಯೆಯಲ್ಲಿ 10.2 ಕಿ.ಮೀ. ದೂರದ ರಸ್ತೆ ವ್ಯಾಪ್ತಿಯಲ್ಲಿ ಸೌರ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತಿದೆ. ಅದಕ್ಕಾಗಿ ಉತ್ತರ ಪ್ರದೇಶ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಯುಪಿಎನ್‌ಇಡಿಎ) ಕೆಲಸದ ಹೊಣೆಯನ್ನು ಹೊತ್ತು ಕೊಂಡಿದೆ. ಜ.22ರ ಮೊದಲು ರಸ್ತೆಯುದ್ದಕ್ಕೂ ಸೌರ ದೀಪ ಅಳವಡಿಕೆ ಕೆಲಸ ಮುಕ್ತಾಯವಾಗ ಲಿದೆ. ಉದ್ದೇಶಿತ 470 ಸೌರ ದೀಪಗಳ ಪೈಕಿ 370ನ್ನು ಅಳವಡಿಸಲಾಗಿದೆ. ಗುಪ್ತಾರ್‌ ಘಾಟ್‌ನಿಂದ ಲಕ್ಷಣ್‌ ಘಾಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅದನ್ನು ಅಳವಡಿಸಲಾಗುತ್ತಿದೆ.

Advertisement

ಸದ್ಯ ಸೌದಿ ಅರೇಬಿಯಾದ ಮಲ್ಹಾಮ್‌ ಎಂಬಲ್ಲಿ 9.7 ಕಿಮೀ ದೂರದ ರಸ್ತೆ 468 ಸೌರ ವಿದ್ಯುತ್‌ ದೀಪಗಳನ್ನು ಅಳವಡಿಸಿ ಗಿನ್ನೆಸ್‌ ದಾಖಲೆ ನಿರ್ಮಾಣ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next