Advertisement
ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಎಂಬ ಸಂಸ್ಥೆಯ ವೆಂಕಟೇಶ್ ನಾಯಕ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಿಂದ ಪಡೆದ ಆರ್‌ಟಿಐ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. 2012ರಿಂದ 2018ರ ಅವಧಿಯಲ್ಲಿ ಬಹರೈನ್, ಒಮನ್, ಕತಾರ್ ಮತ್ತು ಸೌದಿ ಅರೇಬಿಯಾದ ಮಾಹಿತಿಯನ್ನು ಆರ್‌ಟಿಐ ಮೂಲಕ ಪಡೆಯಲಾಗಿದೆ.
ಗಲ್ಫ್ ದೇಶಗಳಿಗೆ ಭಾರತೀಯರು ಭಾರಿ ಪ್ರಮಾಣದಲ್ಲಿ ಉದ್ಯೋಗ ಅರಸಿ ತೆರಳುತ್ತಿದ್ದಾರಾದರೂ, ಅಲ್ಲಿ ಕಳೆದ ಆರು ವರ್ಷಗಳಲ್ಲಿ ಸರಾಸರಿ ದಿನಕ್ಕೆ 10 ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಆರ್‌ಟಿಐ ಪ್ರತಿ ಕ್ರಿಯೆಗಳಿಂದ ತಿಳಿದುಬಂದಿದೆ.
Related Articles
Advertisement
2012 ಮತ್ತು 2018ರ ಅವಧಿಯಲ್ಲಿ 24570 ಭಾರತೀಯರು ಸಾವನ್ನಪ್ಪಿದ್ದಾರೆ. ಭಾರತಕ್ಕೆ ವಿದೇಶಗಳಿಂದ ಕಳುಹಿಸುವ ಹಣದ ಪೈಕಿ ಗಲ್ಫ್ ದೇಶಗಳದ್ದೇ ಅರ್ಧ ಕ್ಕಿಂತಲೂ ಹೆಚ್ಚಿರುತ್ತದೆ. 28 ಲಕ್ಷ ಕೋಟಿ ರೂ. 2012 ರಿಂದ 2017ರ ಅವಧಿಯಲ್ಲಿ ಭಾರತಕ್ಕೆ ವಿದೇಶಗಳಿಂದ ಹರಿದು ಬಂದಿದ್ದು, ಈ ಪೈಕಿ 14 ಲಕ್ಷ ಕೋಟಿ ರೂ. ಗಲ್ಫ್ ದೇಶಗಳಿಂದ ಬಂದಿದೆ. ಹೀಗಾಗಿ ಒಮನ್‌ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ ಹೋಲಿಸಿದರೆ 187 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಾಯಕ್ ಹೇಳಿದ್ದಾರೆ. ಇದೇ ರೀತಿ, ಬಹರೈನ್‌ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ 183 ಜನರು ಸಾವನ್ನಪ್ಪಿದ್ದಾರೆ.