ಧಾರವಾಡ: ಏ.23ರಂದು ಮತದಾನ ಮಾಡಿ ಬರುವ ಗ್ರಾಹಕರಿಗೆ ಕೆ.ಸಿ.ಪಾರ್ಕ್ ಎದುರಿನ ಪಂಜುರ್ಲಿ, ಲಿಂಗಾಯತ
ಭವನ ಬಳಿಯ ಶಿವಸಾಗರ ಹೋಟೆಲ್, ಆರ್‌ಎಲ್‌ಎಸ್ ಕಾಲೇಜು ಬಳಿಯ ಎಲ್‌ಇಎ ಕ್ಯಾಂಟೀನ್‌ನಲ್ಲಿ ಶೇ.10 ರಿಯಾಯಿತಿ ನೀಡಲಿವೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಡಾ| ಸತೀಶ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮತದಾನ ಆಗಿರುವ 20 ಮತಗಟ್ಟೆಗಳನ್ನು ಗುರುತಿಸಿದ್ದು, ಇಲ್ಲಿ ಹೆಚ್ಚು ಮತದಾನ ಆಗುವಂತಾಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂಚೆ ಸಿಬ್ಬಂದಿ ಮೂಲಕ ಮತದಾರರ ಮಾರ್ಗದರ್ಶಿ ಪುಸ್ತಕ, ಭಾವಚಿತ್ರವುಳ್ಳ ಮತದಾರರ ಚೀಟಿ ವಿತರಿಸಿ ಸಂಕಲ್ಪ ಪತ್ರಗಳಿಗೆ ಮತದಾರರಿಂದ ಸಹಿ ಪಡೆಯಲಾಗುವುದು. ಮತದಾರರ ಜಾಗೃತಿ ಸಾಮಗ್ರಿಗಳನ್ನು ಸ್ಥಳೀಯವಾಗಿ ಖಾದಿಯಿಂದ ತಯಾರಿಸಿದ ಚೀಲಗಳಲ್ಲಿರಿಸಿ ವಿತರಿಸಲಾಗುತ್ತಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಾಧ್ಯಮ ಪ್ರತಿನಿಧಿ ಗಳನ್ನೊಳಗೊಂಡ ಸಮಿತಿ ಅತ್ಯುತ್ತಮ ಸೆಲ್ಫಿಗಳನ್ನು ಆಯ್ಕೆ ಮಾಡಲಿದೆ. ವಿಜೇತರಿಗೆ ಸಪ್ನಾ ಬುಕ್ ಹೌಸ್‌ನ ಉಡುಗೊರೆ ವೋಚರ್‌ಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದರು.
ಮತದಾರರ ಜಾಗೃತಿ ಪೋಸ್ಟರ್, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ವಿಜೇತ ಹೊಸಮಠ ನಿರ್ಮಿಸಿರುವ
ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಲಾಯಿತು. ಡಿಡಿಪಿಐ ಗಜಾನನ ಮನ್ನಿಕೇರಿ, ಆನಂದ ವಂದಾಲ, ಡಿ.ವಿ. ಉಳ್ಳಿಕಾಶಿ, ಹೋಟೆಲ್ ಉದ್ಯಮಿಗಳಾದ ರವಿಕಾಂತ ಶೆಟ್ಟಿ, ಮೃತ್ಯುಂಜಯ, ಅಭಿಲಾಷ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಏ.23ರಂದು ಪ್ರಥಮ ಬಾರಿಗೆ ಮತ ಚಲಾಯಿಸಿದ ಯುವ ಮತದಾರರು ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿರುವ
ಸೆಲ್ಪಿ ಸ್ಪರ್ಧೆಯಲ್ಲಿ ಭಾಗವಹಿಸಲು ವಾಟ್ಸಆ್ಯಪ್ ನಂ: 9606539595 ಹಾಗೂ 9606549555ಕ್ಕೆ ಸೆಲ್ಪಿ ಕಳುಹಿಸಬೇಕು. ಉತ್ತಮ ಸೆಲ್ಫಿಗಳಿಗೆ ಬಹುಮಾನ ನೀಡಲಾಗುವುದು. ಈ ಸ್ಪರ್ಧೆ ವೈಯಕ್ತಿಕ ಮತ್ತು ಗುಂಪು ಎರಡೂ ವಿಭಾಗಗಳಲ್ಲಿ ನಡೆಯಲಿದೆ.
ಡಾ| ಸತೀಶ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ
ಸೆಲ್ಪಿ ಸ್ಪರ್ಧೆಯಲ್ಲಿ ಭಾಗವಹಿಸಲು ವಾಟ್ಸಆ್ಯಪ್ ನಂ: 9606539595 ಹಾಗೂ 9606549555ಕ್ಕೆ ಸೆಲ್ಪಿ ಕಳುಹಿಸಬೇಕು. ಉತ್ತಮ ಸೆಲ್ಫಿಗಳಿಗೆ ಬಹುಮಾನ ನೀಡಲಾಗುವುದು. ಈ ಸ್ಪರ್ಧೆ ವೈಯಕ್ತಿಕ ಮತ್ತು ಗುಂಪು ಎರಡೂ ವಿಭಾಗಗಳಲ್ಲಿ ನಡೆಯಲಿದೆ.
ಡಾ| ಸತೀಶ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ