ಪುಣೆ/ನ್ಯೂಯಾರ್ಕ್: ಕೊರೊನಾ ವಿರುದ್ಧ ನೀಡಲು ಎಂದು ಉತ್ಪಾದನೆ ಮಾಡಿ ಇರಿಸಲಾಗಿದ್ದ 10 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಬಳಕೆಯಾಗದೆ ವ್ಯರ್ಥವಾಗಿದೆ.
2021ರ ಡಿಸೆಂಬರ್‌ನಲ್ಲಿಯೇ ಅದರ ಉತ್ಪಾದನೆಯನ್ನು ಸ್ಥಗಿತ ಗೊಳಿಸಲಾಗಿದೆ ಎಂದು ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ.
ಪುಣೆಯಲ್ಲಿ ಮಾತನಾಡಿದ ಅವರು, ಜನರು ಕೊರೊನಾ ಮತ್ತು ಲಸಿಕೆ ಬಗ್ಗೆ ಬೇಸತ್ತು ಹೋಗಿದ್ದಾರೆ. ನಾವು ಕೂಡ ಈ ಬಗ್ಗೆ ಬೇಸತ್ತು ಹೋಗಿದ್ದೇವೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಹೊಸ ಅಲೆ?: ಇದೇ ವೇಳೆ, ಒಮಿಕ್ರಾನ್‌ನ ಉಪ ತಳಿ ಎಕ್ಸ್‌ಬಿಬಿ ಕಾರಣದಿಂದಾಗಿ ಕೆಲವು ದೇಶಗಳಲ್ಲಿ ಕೊರೊನಾ ಹೊಸ ಅಲೆಯ ಸಾಧ್ಯತೆಯ ಆತಂಕವನ್ನು ಡಬ್ಲೂéಎಚ್‌ಒ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ| ಸೌಮ್ಯಾ ಸ್ವಾಮಿನಾಥನ್, “ಸದ್ಯ ಪತ್ತೆಯಾಗಿರುವ ಎಕ್ಸ್‌ಬಿಬಿ, ಮರುಸಂಯೋಜಕ ವೈರಸ್ ಆಗಿದೆ.
ನಾವು ಈ ಮೊದಲು ಕೆಲವು ಮರುಸಂಯೋಜಕ ವೈರಸ್‌ಗಳನ್ನು ಕಂಡಿದ್ದೇವೆ. ಎಕ್ಸ್‌ಬಿಬಿ ಕಾರಣದಿಂದ ಕೆಲವು ದೇಶಗಳಲ್ಲಿ ಸೋಂಕಿನ ಮತ್ತೊಂದು ಅಲೆಯು ಕಾಣಿಸಿಕೊಳ್ಳುವ ಸಾಧ್ಯತೆಯಿದೆ’ ಎಂದರು.