Advertisement

ಚಿಕ್ಕಮಗಳೂರಿನಲ್ಲಿ ಮಗು ಮತ್ತು ಬಾಲಕಿ ಸೇರಿ ಹತ್ತು ಜನರಿಗೆ ಸೋಂಕು

11:51 PM Jun 30, 2020 | Hari Prasad |

ಚಿಕ್ಕಮಗಳೂರು: ಎರಡು ವರ್ಷ ಮಗು ಮತ್ತು ಆರು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಹತ್ತು ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಎರಡು ವರ್ಷದ ಹೆಣ್ಣು ಮಗು, ಆರು ವರ್ಷದ ಬಾಲಕಿ ಹಾಗೂ ಐದು ಜನ ಪುರುಷರು ಮತ್ತು ಮೂರು ಜನ ಮಹಿಳೆಯರಲ್ಲಿ ಸೋಂಕಿರುವುದು ದೃಢಪಟ್ಟಿದೆ.

ತರೀಕೆರೆ ತಾಲ್ಲೂಕಿನಲ್ಲಿ 6, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 3 ಹಾಗೂ ಮೂಡಿಗೆರೆ ತಾಲ್ಲೂಕಿನಲ್ಲಿ 1 ಸೋಂಕಿತ ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ.

ಸೋಂಕಿತ ಎರಡು ವರ್ಷದ ಮಗು ತನ್ನ ತಂದೆ ತಾಯಿ ಜೊತೆ ಇತ್ತೀಚೆಗೆ ದುಂಬೈನಿಂದ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿಗೆ ಆಗಮಿಸಿದ್ದು, ಮಗುವಿನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.

ಪ್ರಯೋಗಾಲಯದ ವರದಿಯಲ್ಲಿ ಮಗುವಿಗೆ ಸೋಂಕಿರುವುದು ದೃಢಪಟ್ಟಿದೆ. ಆರು ವರ್ಷದ ಬಾಲಕಿ ತಂದೆ ತಾಯಿ ಜೊತೆ ಇತ್ತೀಚೆಗೆ ತಮಿಳುನಾಡಿನ ಮಧುರೈನಿಂದ ಚಿಕ್ಕಮಗಳೂರು ತಾಲ್ಲೂಕಿಗೆ ಆಗಮಿಸಿದ್ದು ತಂದೆ, ತಾಯಿ ಹಾಗೂ ಬಾಲಕಿಯಲ್ಲಿ ಕೋವಿಡ್ 19 ಸೋಂಕಿರುವುದು ಕಂಡು ಬಂದಿದೆ.

Advertisement

ತರೀಕೆರೆ ತಾಲ್ಲೂಕಿನಲ್ಲಿ ಪತ್ತೆಯಾಗಿರುವ 6 ಪ್ರಕರಣಗಳಲ್ಲಿ 5 ಪ್ರಕರಣ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಬಂದಿದ್ದು, 31 ವರ್ಷದ ವ್ಯಕ್ತಿ ಪಿ.10827, 50ವರ್ಷದ ಮಹಿಳೆ ಪಿ.10827, 76ವರ್ಷದ ವ್ಯಕ್ತಿಗೆ ಪಿ.10622 ಹಾಗೂ 60ವರ್ಷದ ವ್ಯಕ್ತಿ ಪಿ.10622 ಹಾಗೂ 55 ವರ್ಷದ ವ್ಯಕ್ತಿ ಪಿ.10826 ಸಂಪರ್ಕದಿಂದ ಸೋಂಕು ತಗುಲಿದೆ. 39ವರ್ಷದ ವ್ಯಕ್ತಿಗೆ ಕೋವಿಡ್ 19 ಸೋಂಕು Random ಟೆಸ್ಟ್ ಸಂದರ್ಭದಲ್ಲಿ ಸೋಂಕಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಒಟ್ಟು 80 ಸೋಂಕಿತ ಪ್ರಕರಣಗಳಿದ್ದು ಮಂಗಳವಾರ ಒರ್ವ ಸೋಂಕಿತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಒಟ್ಟು 36ಮಂದಿ ಇದುವರೆಗೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ 43 ಸಕ್ರೀಯ ಪ್ರಕರಣಗಳಿವೆ. ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಕಂಟೈನ್‍ಮೆಂಟ್ ಝೋನ್‍ಗಳಾಗಿ ಗುರುತಿಸಿದ್ದು, ಜಿಲ್ಲಾಡಳಿತ ಈ ಪ್ರದೇಶಗಳ ನಿರ್ವಹಣೆಗೆ ತಹಶೀಲ್ದಾರ್ ಗಳನ್ನು ಕಮಾಂಡರ್ ಗಳನ್ನಾಗಿ ನೇಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next