Advertisement

ಗೋವಾ: ಚರ್ಚೆಗೆ ಕಾರಣವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಯಲ್ಲಿ ವಿಲೀನ ಸುದ್ದಿ !

04:50 PM Jul 10, 2022 | Team Udayavani |

ಪಣಜಿ: ಗೋವಾ ಕಾಂಗ್ರೆಸ್ ಪಕ್ಷದ 11 ಜನ ಶಾಸಕರ ಪೈಕಿ 10 ಜನ ಶಾಸಕರು ಬಿಜೆಪಿಯಲ್ಲಿ ವಿಲೀನವಾಗುವ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ಧಿ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ವರಿಷ್ಠರು ಕಾಂಗ್ರೆಸ್ ನ 10 ಜನ ಶಾಸಕರಿಗೆ ಬಿಜೆಪಿಗೆ ಪ್ರವೇಶ ನೀಡಲು ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.

Advertisement

ಗೋವಾ ವಿಧಾನಸಭಾ ಅಧಿವೇಶನ ಜುಲೈ 11  ರಿಂದ ಆರಂಭಗೊಳ್ಳಲಿದ್ದು, ಗೋವಾ ರಾಜಕೀಯದಲ್ಲಿ ಈ ಭಾರಿ ಬೆಳವಣಿಗೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೋವಾ ಪ್ರಭಾರಿ ದಿನೇಶ್ ಗುಂಡೂರಾವ್ ಶನಿವಾರ ಗೋವಾಕ್ಕೆ ಆಗಮಿಸಿದ್ದರು. ಅವರು ಕಾಂಗ್ರೆಸ್ ಶಾಸಕರ ಸಭೆ ನಡೆಸಿ ಶಾಸಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ 11  ಶಾಸಕರ ಪೈಕಿ 10  ಶಾಸಕರು ಬಿಜೆಪಿ ಸೇರ್ಪಡೆಯಾಗುವುದು ಖಚಿತ ಎಂದೇ ಹೇಳಲಾಗುತ್ತಿದೆ.

ಈ ಕುರಿತು ಪ್ರತಿಪಕ್ಷದ ನಾಯಕ ಮೈಕಲ್ ಲೋಬೊ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಶಾಸಕರೆಲ್ಲ ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜುಲೈ 11 ರಂದು ಅಧಿವೇಶನ ಆರಂಭಗೊಳ್ಳುತ್ತಿರುವುದರಿಂದ ಅಧಿವೇಶನದ ಕಾರ್ಯತಂತ್ರವನ್ನು ರೂಪಿಸಲು ನಾವು ಸಭೆ ಸೇರಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next