Advertisement

ಕೋವಿಡ್ ಸೋಂಕಿತರ ಸೇವೆಗೆ 10 ಆಂಬ್ಯುಲೆನ್ಸ್‌

12:14 PM Apr 25, 2021 | Team Udayavani |

ಹುಬ್ಬಳ್ಳಿ: ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆಗೆಅನುಕೂಲವಾಗುವಂತೆ ಜಿಲ್ಲಾಡಳಿತ ತಂತ್ರಾಂಶ ಆಧಾರಿತಸುಸಜ್ಜಿತ 10 ಆಂಬ್ಯುಲೆನ್ಸ್‌ಗಳನ್ನು ಸೇವೆಗೆ ನೀಡಿದ್ದು,ರವಿವಾರ ಅವುಗಳಿಗೆ ಚಾಲನೆ ನೀಡಲಾಯಿತು.

Advertisement

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿಸಚಿವ ಜಗದೀಶ ಶೆಟ್ಟರ, ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಜಿಲ್ಲಾ ಧಿಕಾರಿ ನಿತೇಶ ಪಾಟೀಲಅವರು ಇಲ್ಲಿನ ಪ್ರವಾಸಿ ಮಂದಿರ ಆವರಣದಲ್ಲಿಹತ್ತು ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದರು.ಈ ಆಂಬ್ಯುಲೆನ್ಸ್‌ಗಳು ಮಾಹಿತಿ ದೊರೆತ 15ನಿಮಿಷದೊಳಗೆ ನಗರದಲ್ಲಿನ ರೋಗಿಯ ಮನೆಯಮುಂದೆ ಇರಲಿದ್ದು, ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಕಾರ್ಯ ಮಾಡಲಿವೆ.

ಆಂಬ್ಯುಲೆನ್ಸ್‌ಗಳ ನಿರ್ವಹಣೆನಿಟ್ಟಿನಲ್ಲಿ ತಹಶೀಲ್ದಾರ್‌ ಕಚೇರಿಯಲ್ಲಿ ವಾರ್‌ರೂಂಆರಂಭಿಸಲಾಗಿದೆ.ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ.ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್‌, ಒಬ್ಬರು ನರ್ಸ್‌ ಸೇರಿದಂತೆತುರ್ತು ಸಲಕರಣೆಗಳು ಇರಲಿವೆ. ಯಾರಿಗಾದರೂಕೋವಿಡ್‌-19 ಸೋಂಕು ಇರುವ ಬಗ್ಗೆ ಮಾಹಿತಿ ಬಂದಕೂಡಲೇ ವಾರ್‌ರೂಂನಿಂದ ತಕ್ಷಣಕ್ಕೆ ಸೋಂಕಿತರನ್ನುಸಂಪರ್ಕಿಸಲಾಗುತ್ತದೆ.

ವಾರ್‌ ರೂಂನಲ್ಲಿ 10 ಜನವೈದ್ಯರು ಇರಲಿದ್ದು, ಸೋಂಕಿತರನ್ನು ಸಂಪರ್ಕಿಸಿಕೌನ್ಸೆಲಿಂಗ್‌ ಆರಂಭಿಸುತ್ತಾರೆ. ಸೋಂಕಿತರ ಸ್ಥಿತಿ ಪರಿಗಣಿಸಿಆಸ್ಪತ್ರೆಗೆ ಅಗತ್ಯವೆನಿಸಿದರೆ ತಕ್ಷಣಕ್ಕೆ ಕರೆದ್ಯೊಯುವಕೆಲಸವನ್ನು ಆಂಬ್ಯುಲೆನ್ಸ್‌ ಮಾಡುತ್ತವೆ.

ಸೋಂಕಿತರುಬಯಸಿದರೆ ಅವರು ಸೂಚಿಸುವ ಖಾಸಗಿ ಆಸ್ಪತ್ರೆಇಲ್ಲವೆ, ಸರಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತದೆ.ಕೋವಿಡ್‌-19 ಎರಡನೇ ಅಲೆಯಿಂದಬೆಂಗಳೂರಿನಲ್ಲಿ ಉಂಟಾಗಿರುವ ಸ್ಥಿತಿಹುಬ್ಬಳ್ಳಿ-ಧಾರವಾಡಕ್ಕೆ ಎದುರಾದರೆ ತುರ್ತುಸ್ಥಿತಿ ನಿರ್ವಹಣೆ ನಿಟ್ಟಿನಲ್ಲಿ ಜಿಲ್ಲಾಡಳಿತ ತಂತ್ರಾಂಶಆಧಾರಿತ ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಿದೆ.ಅದೇ ರೀತಿ ಧಾರವಾಡದಲ್ಲೂ ಒಂದು ವಾರ್‌ ರೂಂಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next