Advertisement
ಕೊಚ್ಚಿ ಬಂದ ತ್ಯಾಜ್ಯ
ಸಮುದ್ರವನ್ನು ಸೇರುವ ಈ ತ್ಯಾಜ್ಯಗಳನ್ನು, ಅಲೆಗಳು ಮತ್ತೆ ತೀರ ಪ್ರದೇಶಕ್ಕೆ ತರುವುದರಿಂದ ಸಮುದ್ರ ಕಿನಾರೆಯ ಪರಿಸರದಲ್ಲಿ ಪಾದರಕ್ಷೆಗಳು, ಪ್ಲಾಸ್ಟಿಕ್, ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ರಾಶಿ ಬಿದ್ದು ಅಸಹ್ಯ ವಾತಾವರಣ ನಿರ್ಮಾಣ ಮಾಡುತ್ತಿದೆ. ಹಠಾತ್ ಏರಿಕೆ
Related Articles
Advertisement
ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹರಿಯುವ ವರಾಹಿ, ಸೌಪರ್ಣಿಕ, ಖೇಟಾ, ಕುಬಾj, ಚಕ್ರಾ ನದಿಗಳ ನೀರು, ಪಂಚಗಂಗಾವಳಿಯಲ್ಲಿ ಸಂಗಮವಾಗಿ ಅರಬ್ಬಿಯ ಕಡಲನ್ನು ಸೇರುವುದರಿಂದ ಸಹಜವಾಗಿ ಎರಡು ತಾಲ್ಲೂಕಿನ ನದಿ ತೀರ ಪ್ರದೇಶಗಳಿಗೆ ಬಂದು ಬೀಳುವ ತ್ಯಾಜ್ಯಗಳು ಒಟ್ಟಾಗಿ ಪಂಚಗಂಗಾವಳಿಯಲ್ಲಿ ಸೇರಿ ಅರಬ್ಬಿಯ ಕಡಲನ್ನು ಪ್ರವೇಶಿಸುತ್ತದೆ.
ಸ್ವಚ್ಛತೆಯಲ್ಲಿ ಭಾಗಿ
ಸಮುದ್ರ ಕಿನಾರೆ ಸ್ವತ್ಛವಾಗಿಡುವ ಮೂಲಕ ಸುಂದರ ಕುಂದಾಪುರದ ಕನಸುಗಳನ್ನು ಕಾಣುತ್ತಿರುವ ಕ್ಲೀನ್ ಕುಂದಾಪುರ ಸ್ವಯಂ ಸೇವಾ ಸಂಘಟನೆಯಲ್ಲಿ ಸೀಮಿತ ಕಾರ್ಯಕರ್ತರಿದ್ದರೂ ಉತ್ಸಾಹದಿಂದ ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸ್ಥಳೀಯ ಪುರಸಭೆ, ಅರಣ್ಯ ಇಲಾಖೆಯ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡು ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡದವರ ಕಾರ್ಯಶೈಲಿಯನ್ನು ಮೆಚ್ಚಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯಾಧೀಶರು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ್ದಾರೆ.
ವ್ಯತಿರಿಕ್ತ ಪರಿಣಾಮ
ಸಮುದ್ರ ಕಿನಾರೆಗಳನ್ನು ಮಳೆಗಾಲದ ಸಮಯದಲ್ಲಿ ಸ್ವತ್ಛಗೊಳಿಸುವುದು ಅತ್ಯಂತ ಗಮನಾರ್ಹ. ಮಳೆಗಾಲದ ಸಂದರ್ಭದಲ್ಲಿ ಒಟ್ಟಾಗುವ ತ್ಯಾಜ್ಯಗಳ ವಿಲೆವಾರಿ ಆಗದೆ ಇದ್ದಲ್ಲಿ, ಹಳೆಯ ತ್ಯಾಜ್ಯದ ಮೇಲೆ ಕೂತು, ಪದರಗಳಾಗಿ ಅವು ಕಿನಾರೆಯ ಮರಳಲ್ಲಿ ಹೂತು ಹೋಗುತ್ತದೆ. ಇದರಿಂದ ಸಮುದ್ರದ ಮತ್ಸ್ಯ ಸಂತತಿ, ಜಲಚರಗಳು, ಕಡಲಾಮೆ, ವಲಸೆ ಹಕ್ಕಿಗಳು ಹಾಗೂ ಇತರ ಜೀವಿಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.
-ಭರತ್ ಬಂಗೇರ ಕ್ಲೀನ್ ಕುಂದಾಪುರ ಪ್ರಾಜೆಕ್ಟ್.
ಮರುಬಳಕೆಯಾಗದ ತ್ಯಾಜ್ಯ
ಬಹುತೇಕ ತ್ಯಾಜ್ಯಗಳು ಮರು ಬಳಕೆ ಮಾಡಲಾಗದ ಹಾಗೂ ಮಾರುಕಟ್ಟೆಯಲ್ಲಿ ಕನಿಷ್ಠ ಮೌಲ್ಯವನ್ನು ಹೊಂದದೆ ಇರುವ ತ್ಯಾಜ್ಯವಾಗಿರುವುದರಿಂದ ಒಟ್ಟಾದ ತ್ಯಾಜ್ಯಗಳ ವಿಲೇವಾರಿ ಮಾಡುವುದು ಸ್ವಯಂ ಸೇವಕರಿಗೆ ಸವಾಲಿನ ಕೆಲಸವಾಗಿದೆ. ಸೀಮಿತ ಬೇಡಿಕೆ ಇರುವ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಕಳುಹಿಸುವುದು ಕೂಡ ಆರ್ಥಿಕ ವೆಚ್ಚವನ್ನು ಹೆಚ್ಚು ಮಾಡುತ್ತದೆ.
ಅಸಮರ್ಪಕ ನಿರ್ವಹಣೆ
ಪರಿಸರ ಹಾಗೂ ಕಡಲಿನ ಬಗ್ಗೆ ಆಸಕ್ತಿ ಇರುವ ಒಂದಷ್ಟು ಸ್ವಚ್ಚ ಮನಸ್ಸುಗಳುಒಗ್ಗೂಡಿದಾಗ, ಕ್ಲೀನ್ ಕುಂದಾಪುರ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಅಂತೆಯೇ ಸಾರ್ವಜನಿಕರು, ವ್ಯಾಪಾರಿಗಳು, ತ್ಯಾಜ್ಯ ಸಂಗ್ರಹಿಸುವವರು, ಕಸ ಸಂಗ್ರಹಿಸುವವರು ಮಾರಾಟದಿಂದ ಲಾಭ ಬರದೇ ಇದ್ದರೆ ಅದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವುದಿಲ್ಲ. ಅದೆಲ್ಲ ಹೀಗೆ ನದಿಯ ಮೂಲಕ ಸಮುದ್ರ ಸೇರುತ್ತದೆ. ಇಲ್ಲದಿದ್ದರೆ ಏಕಾಏಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಪ್ಪಲಿಯಂತಹ ಒಂದೇ ಮಾದರಿಯ ತ್ಯಾಜ್ಯ ಸಂಗ್ರಹವಾಗುವುದು ಕಷ್ಟ.