Advertisement
ಅವರು ಮಂಗಳವಾರ ಬಂಟ್ವಾಳದ ವಿದ್ಯಾಗಿರಿಯ ಬಳಿಯ ಅರ್ಬಿಗುಡ್ಡೆಯಲ್ಲಿ ಮೆಸ್ಕಾಂನಿಂದ ಅನುಷ್ಠಾನ ಗೊಂಡಿರುವ 11.98 ಕೋ.ರೂ. ವೆಚ್ಚದ ಗ್ಯಾಸ್ ಇನ್ಸು ಲೇಟೆಡ್ (ಜಿಐ) ವಿದ್ಯುತ್ ಉಪ ಕೇಂದ್ರ ವನ್ನು ಉದ್ಘಾಟಿಸಿ ಪತ್ರಕರ್ತರ ಜತೆ ಮಾತನಾಡಿದರು.
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗ ದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಯಚೂರು, ಬಳ್ಳಾರಿಯ ಎಲ್ಲ ಯೂನಿಟ್‌ಗಳು ಕೂಡ ಕಾರ್ಯಾರಂಭ ಮಾಡಿವೆ. ಹಿಂದೆ ಪ್ರತೀ ಸಂದರ್ಭದಲ್ಲಿ 3, 6 ಯೂನಿಟ್‌ಗಳು ಸ್ಥಗಿತಗೊಳ್ಳುತ್ತಿದ್ದವು. ಕಳೆದ 7 ವರ್ಷಗಳಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 5,020 ಮೆಗಾವ್ಯಾಟ್ ಉತ್ಪಾದನೆ ಮಾಡಿದ್ದು, ಕಲ್ಲಿದ್ದಲು ನಿರಂತರ ಸರಬರಾಜು ಇದ್ದ ಕಾರಣ ಇದು ಸಾಧ್ಯವಾಗಿದೆ. ಜತೆಗೆ ಅಧಿಕಾರಿಗಳು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ ಎಂದರು. ಪವರ್‌ಮನ್‌ಗಳ ನೇಮಕ
ಹೆಚ್ಚುವರಿ ಪವರ್‌ಮನ್‌ಗಳ ನೇಮ ಕಾತಿ ಪ್ರಕ್ರಿಯೆ ಆರಂಭಿಸಿದ್ದು, 899 ಹೊಸ ನೇಮಕಾತಿ ನಡೆದಿದೆ. ಮೆಸ್ಕಾಂನಲ್ಲೇ 600ಕ್ಕೂ ಅಧಿಕ ಪವರ್‌ಮನ್‌ಗಳ ನೇಮಕವಾಗಿದೆ. ಹುದ್ದೆ ಭರ್ತಿಯ ದೃಷ್ಟಿಯಿಂದ 1,500 ಮಂದಿಯ ನೇಮಕಾತಿಗಾಗಿ ಕೆಪಿಟಿಸಿಎಲ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಜೂನ್‌ನಲ್ಲಿ ಪರೀಕ್ಷೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಪವರ್‌ಮನ್‌ಗಳಿಗೆ ಅವಘಡದ ಸಂದರ್ಭ ನೀಡುವ ವಿಮೆಯ ಮೊತ್ತವನ್ನು 20 ಲಕ್ಷ ರೂ.ಗಳಿಂದ 40 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದರು.
Related Articles
Advertisement