Advertisement

ಶತಮಾನದ ಅತೀ ದೊಡ್ಡ ವಲಸೆ!: ಒಂದೇ ವಾರದಲ್ಲಿ ಉಕ್ರೇನ್ ತೊರೆದ ಒಂದು ಮಿಲಿಯನ್ ಜನರು!

09:32 AM Mar 03, 2022 | Team Udayavani |

ವಾಷಿಂಗ್ಟನ್/ ಕೀವ್: ರಷ್ಯಾದ ಆಕ್ರಮಣದ ಕಾರಣದಿಂದ ಒಂದು ವಾರದಲ್ಲಿ ಒಂದು ಮಿಲಿಯನ್ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ ನಿರಾಶ್ರಿತರ ಏಜೆನ್ಸಿಯು ಹೇಳಿದೆ. ಈ ಶತಮಾನದಲ್ಲಿ ಇಷ್ಟು ವೇಗದಲ್ಲಿ ಜನರ ಪಲಾಯನದ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅದು ತಿಳಿಸಿದೆ.

Advertisement

ಉಕ್ರೇನ್‌ನ ಜನಸಂಖ್ಯೆಯ ಶೇಕಡಾ 2 ಕ್ಕಿಂತ ಜನರು ಒಂದು ವಾರದಲ್ಲಿ ದೇಶ ತೊರೆದಿದ್ದಾರೆ ಎಂದು ವರದಿ ತಿಳಿಸಿದೆ. ವಿಶ್ವ ಬ್ಯಾಂಕ್ 2020 ರ ಕೊನೆಯಲ್ಲಿ ಜನಸಂಖ್ಯೆಯನ್ನು 44 ಮಿಲಿಯನ್ ಎಂದು ಎಣಿಕೆ ಮಾಡಿದೆ.

4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಎಂದು ಯುಎನ್ ಏಜೆನ್ಸಿಯು ಭವಿಷ್ಯ ನುಡಿದಿದೆ. ಆದರೆ ಆ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದೂ ಅದು ಎಚ್ಚರಿಸಿದೆ.

ಇದನ್ನೂ ಓದಿ:ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳುಗಳಾಗಿರಿಸಿದೆ: ರಷ್ಯಾ ಆರೋಪ

ಅಂಕಿಅಂಶಗಳ ಪ್ರಕಾರ, 2011 ರಲ್ಲಿ ಅಂತರ್ಯುದ್ಧ ಭುಗಿಲೆದ್ದ ಸಿರಿಯಾ, ಪ್ರಸ್ತುತ ಅತಿ ಹೆಚ್ಚು ನಿರಾಶ್ರಿತರ ವಲಸೆ ಕಂಡ ದೇಶವಾಗಿ ಉಳಿದಿದೆ. 5.6 ದಶಲಕ್ಷಕ್ಕೂ ಹೆಚ್ಚು ಜನರು ಸಿರಿಯಾ ತೊರೆದಿದ್ದಾರೆ. ಆದರೆ 2013 ರ ಆರಂಭದಲ್ಲಿ ಸಿರಿಯಾದಿಂದ ಒಂದು ಮಿಲಿಯನ್ ನಿರಾಶ್ರಿತರು ಆ ದೇಶವನ್ನು ತೊರೆಯಲು ಕನಿಷ್ಠ ಮೂರು ತಿಂಗಳುಗಳನ್ನು ತೆಗೆದುಕೊಂಡಿದ್ದರು.

Advertisement

“ಈ ದರದಲ್ಲಿ” ಉಕ್ರೇನ್‌ನಿಂದ ವಲಸೆ “ಈ ಶತಮಾನದ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟಿನ” ಮೂಲವನ್ನಾಗಿ ಮಾಡಬಹುದು ಎಂದು ಯುಎನ್ಎಚ್ಸಿಆರ್ ವಕ್ತಾರ ಶಾಬಿಯಾ ಮಾಂಟೂ ಬುಧವಾರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next