Advertisement
ಮೃತ ಯುವಕನ್ನು ರಾಹುವಾ ಮನ್ಸೂರ್ ಗ್ರಾಮದ ರಾಮ್ ಗೋಪಾಲ್ ಮಿಶ್ರಾ (22) ಎನ್ನಲಾಗಿದೆ.
ಹಾರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಹ್ಸಿ ಮಹಾರಾಜ್‌ಗಂಜ್‌ನಲ್ಲಿ ದುರ್ಗಾ ವಿಗ್ರಹ ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ಡಿಜೆ ವಿಚಾರದಲ್ಲಿ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದಿದೆ ಬಳಿಕ ಇದು ಹಿಂಸಾತ್ಮಕ ರೂಪಕ್ಕೆ ತಿರುಗಿದೆ ಈ ವೇಳೆ ಒಂದು ಕೋಮಿನ ವ್ಯಕ್ತಿ ರಾಮ್ ಗೋಪಾಲ್ ಮೇಲೆ ಗುಂಡು ಹಾರಿಸಿದ್ದಾನೆ. ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು ಇದರಿಂದ ರೊಚ್ಚಿಗೆದ್ದ ಇನ್ನೊಂದು ಕೋಮಿನ ಜನ ಮಹಾರಾಜ್‌ಗಂಜ್ ಮಾರುಕಟ್ಟೆಯಲ್ಲಿದ್ದ ಕೆಲವು ವಾಹನಗಳನ್ನು ಧ್ವಂಸಗೊಳಿಸಿದರು ಮತ್ತು ಬೆಂಕಿ ಹಚ್ಚಿದರು. ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ ಮತ್ತು ಮಾರುಕಟ್ಟೆ ಪ್ರದೇಶವನ್ನು ಕಂಟೋನ್ಮೆಂಟ್ ಪ್ರದೇಶವಾಗಿ ಪರಿವರ್ತಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಐಜಿ ದೇವಿಪಟ್ಟಣ ಅಮರೇಂದ್ರ ಪ್ರಸಾದ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Related Articles
Advertisement
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ: ಈ ಹಿಂಸಾಚಾರದ ನಂತರ, ಪೊಲೀಸ್ ಠಾಣೆಯ ಪ್ರಭಾರಿ ಹಾರ್ದಿ ಮತ್ತು ಹೊರಠಾಣೆ ಪ್ರಭಾರಿ ಮಹ್ಸಿಯನ್ನು ಅಮಾನತುಗೊಳಿಸಲಾಗಿದೆ. ಅದೇ ಸಮಯದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಹ್ರೈಚ್‌ನ ಮಹ್ಸಿಯಲ್ಲಿ ವಾತಾವರಣವನ್ನು ಹಾಳು ಮಾಡಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. 30 ಜನರ ಬಂಧನ :
ಘಟನೆಗೆ ಸಂಬಂಧಿಸಿ ಭರೈಚ್ ಪೊಲೀಸರು ಕನಿಷ್ಠ 30 ಜನರನ್ನು ಬಂಧಿಸಿರುವುದಾಗಿ ಹೇಳಲಾಗಿದೆ ಅಲ್ಲದೆ ರಾಮ್ ಗೋಪಾಲ್ ಮಿಶ್ರಾ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಸಲ್ಮಾನ್ ಎಂಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.