Advertisement

Victory Rally: ರ‍್ಯಾಲಿ ವೇಳೆ ಸಾಮೂಹಿಕ ಗುಂಡಿನ ದಾಳಿ 1 ಮೃತ್ಯು, 21 ಮಂದಿಗೆ ಗಾಯ

08:50 AM Feb 15, 2024 | Team Udayavani |

ಕಾನ್ಸಾಸ್ ಸಿಟಿ: ಅಮೆರಿಕದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟು, ಮಕ್ಕಳು ಸೇರಿದಂತೆ ಸುಮಾರು 21 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಕಾನ್ಸಾಸ್ ಸಿಟಿಯಲ್ಲಿ ಬುಧವಾರ ನಡೆದಿದೆ.

Advertisement

ಇಲ್ಲಿನ ಕಾನ್ಸಾಸ್ ಸಿಟಿಯಲ್ಲಿ ನಡೆಯುತಿದ್ದ ಸೂಪರ್ ಬೌಲ್ ವಿಜಯೋತ್ಸವದ ರ‍್ಯಾಲಿ ನಡೆಯುತ್ತಿದ್ದ ವೇಳೆ ಸಾಮೂಹಿಕ ಗುಂಡಿನ ದಾಳಿ ನಡೆದಿದೆ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು ಎನ್ನಲಾಗಿದ್ದು ಗುಂಡಿನ ದಾಳಿಗೆ ರ‍್ಯಾಲಿಯಲ್ಲಿ ಡಿಜೆಯಾಗಿದ್ದ ಲಿಸಾನ ಲೋಪೆಜ್ ಗಾಲ್ವಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಉಳಿದಂತೆ ಹನ್ನೆರಡು ಮಕ್ಕಳು ಸೇರಿದಂತೆ ಇಪ್ಪತ್ತಮೂರು ಮಂದಿಗೆ ಗುಂಡಿನ ದಾಳಿಗೆ ಗಾಯಗಳಾಗಿದ್ದು ಅವರನ್ನು ಮರ್ಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಂಡಿನ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾಗಿದ್ದು ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next