Advertisement

1 Lakh Crore Rs. ಮೌಲ್ಯದ 112 ಹೆದ್ದಾರಿ ಯೋಜನೆಗೆ ಪಿಎಂ ಚಾಲನೆ

01:02 AM Mar 12, 2024 | Team Udayavani |

ಹೊಸದಿಲ್ಲಿ: ಬರೋಬ್ಬರಿ 1 ಲಕ್ಷ ಕೋಟಿ ರೂ. ವೆಚ್ಚದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಈ ಪೈಕಿ ಕರ್ನಾಟಕಕ್ಕೆ ಸಂಬಂಧಿಸಿದ 2,750 ಕೋಟಿ ರೂ.ವೆಚ್ಚದ ಯೋಜನೆಗಳೂ ಸೇರಿವೆ.

Advertisement

ಮೊದಲಿಗೆ 4,100 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ದ್ವಾರಕ ಎಕ್ಸ್‌ಪ್ರೆಸ್‌ ವೇನ ಹರ್ಯಾಣ ಸೆಕ್ಷನ್‌ ಅನ್ನು ಪ್ರಧಾನಿ ಸೋಮವಾರ ಉದ್ಘಾಟನೆ ಮಾಡಿದರು. ಈ ಹರ್ಯಾಣ ಸೆಕ್ಷನ್‌ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹರಿಯಾಣದ ಗುರುಗ್ರಾಮ್‌ ನಡುವಿನ ಸಂಪರ್ಕವನ್ನು ಸುಗಮಗೊಳಿಸಲಿದೆ. ಅಲ್ಲದೇ, ಈ ಪ್ರದೇಶಗಳ ನಡುವಿನ ದಟ್ಟಣೆ ಕಡಿಮೆ ಮಾಡಿ ಪ್ರಯಾಣ ಸಮಯವನ್ನು 20 ನಿಮಿಷ ತಗ್ಗಿಸಲಿದೆ. 19 ಕಿ.ಮೀ. ವ್ಯಾಪ್ತಿಯ ಈ ಸೆಕ್ಷನ್‌ ಷಟ³ಥ ರಸ್ತೆಗಳನ್ನೊಳಗೊಂಡಿದೆ.

ಇನ್ನು ಇದೇ ವೇಳೆ 32,700 ಕೋಟಿ ರೂ.ವೆಚ್ಚದಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪಿಎಂ ಹಸಿರು ನಿಶಾನೆ ತೋರಿದ್ದಾರೆ. ಅಲ್ಲದೇ, ನಗರ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ 20,500 ಕೋಟಿ ರೂ.ವೆಚ್ಚದ ಯೋಜನೆಗಳಿಗೂ ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next