Advertisement

1 Crore Rs. ಮೌಲ್ಯದ ದೋಣಿ ಮುಳುಗಿಸಿದ ತಿಮಿಂಗಿಲಗಳ ಗುಂಪು!

12:49 AM Jul 28, 2024 | Team Udayavani |

ಹೊಸದಿಲ್ಲಿ: ಮೆಡಿಟರೇನಿಯನ್‌ ಸಮುದ್ರದಲ್ಲಿ ಹಾಯಿದೋಣಿ (ಯಾಚ್‌) ಮೇಲೆ ದಾಳಿ ನಡೆಸಿದ ಕಿಲ್ಲರ್‌ ವೇಲ್‌ ಗುಂಪು ದೋಣಿಯನ್ನು ಮುಳುಗಿಸಿವೆ. ಈ ದೋಣಿ ಸುಮಾರು 1 ಕೋಟಿ ರೂ. ಮೌಲ್ಯ ಹೊಂದಿ ದ್ದು, ಹಡಗಿನಲ್ಲಿದ್ದ ಸಿಬಂದಿ ರಕ್ಷಣ ದೋಣಿಗಳನ್ನು ಬಳಸಿ ಬಚಾವಾಗಿದ್ದಾರೆ. ರಾಬರ್ಟ್‌ ಪೋವೆಲ್‌ ಮತ್ತು ಸ್ನೇಹಿತರು 10 ದಿನಗಳ ಪ್ರವಾಸಕ್ಕಾಗಿ ಸಮುದ್ರಕ್ಕಿಳಿದಿದ್ದರು. ಆದರೆ ಪ್ರವಾಹ ಶುರುವಾದ 22 ಗಂಟೆಗಳಲ್ಲಿ ದೋಣಿ ಸಮುದ್ರದ ತಳ ಸೇರಿತು. ಸತತವಾಗಿ ದೋಣಿ ಮೇಲೆ ದಾಳಿ ನಡೆಸಿದ ತಿಮಿಂಗಿಲಗಳು, ದೋಣಿ ಸಂಪೂರ್ಣ ನಾಶವಾಗುವವರೆಗೂ ಸುಮ್ಮನಾಗಲಿಲ್ಲ ಎಂದು ರಾಬರ್ಟ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next