Advertisement

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

10:24 AM Nov 18, 2024 | Team Udayavani |

ಬೆಂಗಳೂರು: ಕಂಪನಿಯೊಂದರ ಪಾಲುದಾರನ ಸೋಗಿನಲ್ಲಿ ಸಂದೇಶ ಕಳುಹಿಸಿದ ಸೈಬರ್‌ ವಂಚಕರು, ಉದ್ಯಮಿಯಿಂದ 1.05 ಕೋಟಿ ರೂ. ವರ್ಗಾಯಿಸಿಕೊಂಡು ವಂಚಿಸಿದ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜಯನಗರದ 4ನೇ ಬ್ಲಾಕ್‌ ನಿವಾಸಿ ಕೆ.ವಿ.ಗೋಪಾ ಕುಮಾರ್‌ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದ ವಿವರ: ದೂರುದಾರ ಉದ್ಯಮಿ ಕೆ.ವಿ.ಗೋಪಾ ಕುಮಾರ್‌ ನಂದಿನಿ ಲೇಔಟ್‌ನಲ್ಲಿ ಫಿಡೆಸ್‌ ಎಲೆಕ್ಟ್ರಾನಿಕ್ಸ್‌ ಹೆಸರಿನ ಕಂಪನಿ ಹೊಂದಿದ್ದು, ಅದರ ನಿರ್ದೇಶಕರಾಗಿದ್ದಾರೆ. ಇದೇ ಕಂಪನಿಗೆ ಎ.ಕೆ.ಸಂತೋಷ್‌ ಸಹ ನಿರ್ದೇಶಕರಾಗಿದ್ದಾರೆ.

ಇತ್ತೀಚೆಗೆ ಸಂತೋಷ್‌ ಸೋಗಿನಲ್ಲಿ ಅಪರಿಚಿತ ವ್ಯಕ್ತಿ ವಾಟ್ಸ್‌ಆ್ಯಪ್‌ ಮೂಲಕ ಗೋಪಾ ಕುಮಾರ್‌ಗೆ ಸಂದೇಶ ಕಳುಹಿಸಿ ತುರ್ತಾಗಿ 95 ಲಕ್ಷ ರೂ. ಕಳುಹಿಸುವಂತೆ ಕೋರಿದ್ದಾನೆ. ಕೂಡಲೇ ಗೋಪಾ ಕುಮಾರ್‌ ಆರ್‌ಟಿಜಿಎಸ್‌ ಮೂಲಕ ಅಪರಿಚಿತನ ಬ್ಯಾಂಕ್‌ ಖಾತೆಗೆ 50 ಲಕ್ಷ ರೂ. ವರ್ಗಾಯಿಸಿದ್ದಾರೆ. ಬಳಿಕ ಕಂಪನಿ ಪ್ರಾಜೆಕ್ಟ್ ಸಂಬಂಧ ಮತ್ತಷ್ಟು ಹಣ ಬೇಕೆಂದು ಆರೋಪಿ ಸಂದೇಶ ಕಳುಹಿಸಿದ್ದಾನೆ. ಆಗರೂ ದೂರುದಾರ ಅಪರಿಚಿತನ ಬ್ಯಾಂಕ್‌ ಖಾತೆಗೆ 45 ಲಕ್ಷ ರೂ. ಮತ್ತು 10 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಕೆಲ ದಿನಗಳ ಬಳಿಕ ಕಂಪನಿ ಸಹ ನಿರ್ದೇಶಕ ಸಂತೋಷ್‌ರನ್ನು ಹಣದ ಬಗ್ಗೆ ವಿಚಾರಿಸಿದಾಗ, ತಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದಾರೆ. ಬಳಿಕ ಕೆ.ವಿ.ಗೋಪಾ ಕುಮಾರ್‌ಗೆ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಂಚಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next