Advertisement
ಸಿಲಿಕಾನ್ ಸಿಟಿಯ ಹಾಳಾದ ರಸ್ತೆಗಳಲ್ಲಿ ಅಡ್ಡಾ ದಿಡ್ಡಿ ಚಾಲನೆ ಮಾಡುವುದಲ್ಲದೆ, ಪ್ರತಿ ವರ್ಷ ಐದಾರು ಮಂದಿ ಅಮಾಯಕರನ್ನು ಬ ಲಿ ಪಡೆಯುತ್ತಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕರು, ಇದರೊಂದಿಗೆ ಅತೀ ವೇಗ ಹಾಗೂ ನಿರ್ಲಕ್ಷ್ಯ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಎಲ್ಲೆಂದರಲ್ಲಿ ಬಸ್‌ಗಳ ನಿಲ್ಲಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡಿ ಸಂಚಾರ ಪೊಲೀಸ್ ವಿಭಾಗಕ್ಕೆ ಪ್ರತಿ ವರ್ಷ ಕೋಟ್ಯಂತರ ರೂ. ದಂಡ ಪಾವತಿಸುವ ಹಂತ ತಲುಪಿದ್ದಾರೆ. ಸಂಚಾರ ಪೊಲೀಸ್ ವಿಭಾಗದ ಮೂರು ವರ್ಷಗಳ ಅಂಕಿ-ಅಂಶಗಳು ಅದಕ್ಕೆ ಪುಷ್ಟಿ ನೀಡುತ್ತಿದ್ದು, ಪ್ರಸ್ತುತ 35,048 ಪ್ರಕರಣಗಳ 1,94,83,200 ರೂ. ಬಾಕಿ ಉಳಿಸಿಕೊಂಡಿದ್ದಾರೆ.
Related Articles
Advertisement
“ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆ ಕುರಿತು ಆಗಿಂದಾಗ್ಗೆ ಬಸ್‌ಗಳ ನಂಬರ್ ಉಲ್ಲೇಖೀಸಿ ಸಾರಿಗೆಸಂಸ್ಥೆಗಳಿಗೆ ನೋಟಿಸ್ ಕೊಡಲಾಗುತ್ತದೆ. ಪ್ರಸ್ತುತ ಒಂದು ಕೋಟಿ ಮೀರಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.” – ಡಾ ಬಿ.ಆರ್. ರವಿಕಾಂತೇಗೌಡ, ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ.
ಬಸ್ ಚಾಲಕನ ಕಿಸೆಯಿಂದಲೇ ದಂಡ ಪಾವತಿ?
ದಂಡವನ್ನು ಸಾರಿಗೆ ಸಂಸ್ಥೆಗಳು ಪಾವತಿಸುವುದಿಲ್ಲ. ನಿರ್ದಿಷ್ಟ ವಾಹನಗಳ ನಂಬರ್‌ಗಳ ಮೇಲೆ ದಂಡ ವಿಧಿಸಲಾಗುತ್ತದೆ. ಆಯಾ ತಿಂಗಳು ಆಗುವ ಉಲ್ಲಂಘನೆಗಳ ಕುರಿತು ಸ್ಥಳ, ಸಮಯ, ದಿನಾಂಕ ಉಲ್ಲೇಖೀಸಿ ಎರಡು ಸಾರಿಗೆ ಸಂಸ್ಥೆಗಳಿಗೂ ನೋಟಿಸ್ ಬರುತ್ತದೆ. ನಂತರ ಬಸ್ ಚಾಲಕನ ಹೆಸರು ಉಲ್ಲೇಖೀಸಿ ಸಂಬಂಧಿಸಿದ ಡಿಪೋಗೆ ಕಳುಹಿಸಲಾಗುತ್ತಿ ದ್ದು, ನಂತರ ಡಿಪೋ ವ್ಯವಸ್ಥಾಪಕರು ಚಾಲಕನೇ ದಂಡ ಪಾವತಿಸಲು ಸೂಚಿಸುತ್ತಾರೆ. ಒಂದು ವೇಳೆ ಆತ ನಿರ್ಲಕ್ಷಿಸಿದರೆ, ಆತನ ವೇತನದಿಂದಲೇ ಹಣ ಹಿಡಿದು ದಂಡ ಪಾವತಿ ಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
- – ಮೋಹನ್ ಭದ್ರಾವತಿ