Advertisement
ಶುಕ್ರವಾರ ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 2022ರ ಏಪ್ರಿಲ್ 1ಕ್ಕೆ ಆರಂಭಿಕ ಶಿಲ್ಕು ರೂಪದಲ್ಲಿ 5.95 ಲಕ್ಷ ಟನ್ ಇದ್ದು, ಅಲ್ಲಿಂದ ಈಚೆಗೆ ಅಂದರೆ ಸೆ. 20ರವರೆಗೆ 30.40 ಲಕ್ಷ ಟನ್ ಪೂರೈಕೆ ಆಗಿದೆ.
Related Articles
Advertisement
ಕೇರಳದಿಂದ ಬಂದು ಸುಮಾರು 80 ಸಾವಿರದಿಂದ 1 ಲಕ್ಷ ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಅಲ್ಲಿ ಈ ಗ್ಲೈಫೋಸೇಟ್ ಅನ್ನು ಹೇರಳವಾಗಿ ಬಳಕೆ ಮಾಡಲಾಗುತ್ತಿದೆ. ಇದರಿಂದ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಆದ್ದರಿಂದ ಇದನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಮ ಹೆಬ್ಟಾರ್, ನನ್ನ ಕ್ಷೇತ್ರದಲ್ಲೂ ಈ ಸಮಸ್ಯೆ ಕಂಡುಬಂದಿದೆ. ಶುಂಠಿಗೆ ಈ ಗೊಬ್ಬರ ಸಿಂಪರಣೆ ಮಾಡಲಾಗುತ್ತಿದೆ. ಆದರೆ, ನಿಷೇಧ ತೀರ್ಮಾನ ಕೇಂದ್ರ ಸರ್ಕಾರದ ಹಂತದಲ್ಲಿ ಆಗಬೇಕು ಎಂದು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರವಿ, ನೆರೆಯ ಕೇರಳ, ಪಂಜಾಬ್, ಹರಿಯಾಣದಲ್ಲಿ ಇದೇ ಗೊಬ್ಬರವನ್ನು ನಿಷೇಧಿಸಲಾಗಿದೆ. ಅಲ್ಲಿ ಸಾಧ್ಯವಾಗಿದ್ದು, ಇಲ್ಲಿ ಯಾಕೆ ಆಗುವುದಿಲ್ಲ ಎಂದು ಕೇಳಿದರು. ಆಗ ಸಚಿವರು, ನಿಷೇಧಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.