Advertisement

Covid ವೇಳೆ 1.8 ಲಕ್ಷ ಮಕ್ಕಳ ಪೋಷಕರು ಸಾವು! ; ಕೇಂದ್ರ ಸರಕಾರ 

12:22 AM Aug 04, 2024 | Team Udayavani |

ಹೊಸದಿಲ್ಲಿ: ಕೋವಿಡ್‌ ಸಾಂಕ್ರಾಮಿಕದ ಕಾಲದಲ್ಲಿ 1.82 ಲಕ್ಷ ಮಕ್ಕಳು ಕನಿಷ್ಠ ಒಬ್ಬ ಪೋಷಕರನ್ನು ಕಳೆದು ಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ. ಈ ಮೂಲಕ ಈ ಹಿಂದೆ ನೀಡಿದ್ದ ದತ್ತಾಂಶಗಳನ್ನು ಮರುಪರಿ ಶೀಲನೆ ಮಾಡಿ ನೀಡಿದೆ. ಒಡಿಶಾದಲ್ಲಿ 34,160 ಇಂತಹ ಪ್ರಕರಣಗಳು ನಡೆದಿವೆ ಎಂದು ಹೇಳಿದೆ.

Advertisement

ಕಾಂಗ್ರೆಸ್‌ ಸಂಸದ ಅಡೂರ್‌ ಪ್ರಕಾಶ್‌ ಮತ್ತು ಟಿಡಿಪಿ ಸಂಸದ ಮುಗುಂಟ ಶ್ರೀನಿವಾಸುಲು ರೆಡ್ಡಿ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಈ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ 27,302, ಉತ್ತರ ಪ್ರದೇಶದಲ್ಲಿ 19,437 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಇದೇ ವೇಳೆ ಪಿಎಂ ಕೇರ್ ಯೋಜನೆಗಳಿಂದ 4,532 ಮಕ್ಕಳಿಗೆ ಸಹಾಯವನ್ನು ಒದಗಿಸಲಾಗಿದೆ ಎಂದು ಹೇಳಿದೆ.

ಈ ಮೊದಲು ಪೋಷಕರ ಸಾವು ಸಂಬಂಧ ಮಾಹಿತಿ ನೀಡಿದ್ದ ಸರಕಾರ ಕೋವಿಡ್‌ ಸಮಯದಲ್ಲಿ 1.42
ಲಕ್ಷ ಮಕ್ಕಳು ಕನಿಷ್ಠ ಓರ್ವ ಪೋಷ ಕರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿತ್ತು. ಪ್ರಸ್ತುತ ಈ ಸಂಖ್ಯೆಯನ್ನು ತಿದ್ದುಪಡಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next