Advertisement

3 ವರ್ಷಗಳಿಗೆ ಬ್ಯಾಂಕುಗಳಿಗೆ 1.76 ಲಕ್ಷ ಕೋಟಿ ರೂ. ನಷ್ಟ!

10:37 AM Oct 12, 2019 | sudhir |

ಹೊಸದಿಲ್ಲಿ: ಮರುಪಾವತಿಯಾಗದ ಸಾಲಗಳಿಂದಾಗಿ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯು ಮೂರು ವರ್ಷಗಳಲ್ಲಿ 1.76 ಲಕ್ಷ ಕೋಟಿ ರೂ.ಗಳ ನಷ್ಟ ಅನುಭವಿಸಿವೆ ಎಂದು ಆರ್‌ಟಿಐನಿಂದ ತಿಳಿದುಬಂದಿದೆ.

Advertisement

100 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚು ಸಾಲ ಪಡೆದ ಸುಮಾರು 416 ಸುಸ್ತಿದಾರರ ಸಾಲವನ್ನು ಭಾಗಶಃ ಮನ್ನಾ ಮಾಡಲಾಗಿದೆ. ಇಂಥ ಒಬ್ಬ ಸುಸ್ತಿದಾರನಿಗೆ ಮನ್ನಾ ಮಾಡಲಾಗಿರುವ ಸಾಲದ ಮೊತ್ತ ಸರಾಸರಿ 424 ಕೋಟಿ ರೂ.ಗಳಷ್ಟಿದೆ ಎಂಬ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಮೇಲಿನ ಲೆಕ್ಕಾಚಾರ ಕೇವಲ ಮೂರು ವರ್ಷಗಳದ್ದು ಮಾತ್ರ.

ಆದರೆ, 2015ರಿಂದ 2018ರ ವರೆಗೆ ವಾಣಿಜ್ಯ ಬ್ಯಾಂಕುಗಳು ತಾವು ನೀಡಿದ್ದ ಒಟ್ಟಾರೆ ಸಾಲದಲ್ಲಿ 2.17 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next