– ಪ್ರತಿ 1 ಕೋರ್ಟ್‌ನಲ್ಲಿ ವಾರ್ಷಿಕ 165 ಪ್ರಕರಣ ಇತ್ಯರ್ಥ ನಿರೀಕ್ಷೆ
ನವದೆಹಲಿ: ದೇಶದ ನಾನಾ ನ್ಯಾಯಾಲಯಗಳಲ್ಲಿ, 1.66 ಲಕ್ಷ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ) ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಅವುಗಳ ತ್ವರಿತ ವಿಚಾರಣೆಗೆ ದೇಶಾದ್ಯಂತ ಒಟ್ಟು 1,023 ಪೋಕ್ಸೋ ಶೀಘ್ರಗತಿ ವಿಶೇಷ ನ್ಯಾಯಾಲಯಗಳನ್ನು (ಎಫ್ಟಿಎಸ್‌ಸಿ) ಸ್ಥಾಪಿಸಲಾಗುವುದು ಎಂದು ಕೇಂದ್ರ ಕಾನೂನು ಇಲಾಖೆ ತಿಳಿಸಿದೆ.
Advertisement
ಅ. 2ರಿಂದ ನ್ಯಾಯಾಲಯಗಳ ಸ್ಥಾಪನಾ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಈ ನ್ಯಾಯಾಲಯಗಳಿಗೆ ವಾರ್ಷಿಕವಾಗಿ 165 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ನೀಡಲಾಗುತ್ತದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.