Advertisement

ಆನ್‌ಲೈನ್‌ ಗೇಮ್ ಗಾಗಿ ನೆರೆಮನೆಗೆ ಕನ್ನ ಹಾಕಿ 1.50 ಲಕ್ಷ ರೂ. ದೋಚಿದ ಆಸಾಮಿ

06:22 PM Dec 27, 2021 | Team Udayavani |

ಕಾಸರಗೋಡು : ಪನ್ನಿಪ್ಪಾರೆಯ ಅಬ್ದುಲ್‌ ರಹ್ಮಾನ್‌ ಅವರ ಪತ್ನಿ ಮಜ್ಮಾ ಅವರ ಮನೆಯಿಂದ ಒಂದೂವರೆ ಲಕ್ಷ ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆ ನಿವಾಸಿ ಮುಹಮ್ಮದ್‌ ಅನಸ್‌ (18)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಡಿ. 23ರಂದು ಮಧ್ಯಾಹ್ನ 1ರಿಂದ 4 ಗಂಟೆಯ ಮಧ್ಯೆ ಕಳವು ಮಾಡಲಾಗಿದೆ. ಈ ಸಂದರ್ಭ ಮನೆಯವರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮನೆಗೆ ಬಂದಾಗ ಒಂದೂವರೆ ಲಕ್ಷ ರೂ. ಕಳವಾಗಿತ್ತು. ಈ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ಸಂಬಂಧ ನೆರೆಮನೆಯ ಅನಸ್‌ನನ್ನು ಬಂಧಿಸಿದ ಪೊಲೀಸರು ವಿಚಾರಣೆ ಮಾಡಿದಾಗ ಮೊಬೈಲ್‌ ಆನ್‌ಲೈನ್‌ ಆಟಕ್ಕೆ ಕಳವು ಮಾಡಿದ್ದಾಗಿ ತಿಳಿದು ಬಂದಿದೆ. ಕಳವುಗೈದ ಹಣದಲ್ಲಿ 80 ಸಾವಿರ ರೂ. ಆಟಕ್ಕೆ ಬಳಸಿದ್ದಾನೆನ್ನಲಾಗಿದೆ.

ಇದನ್ನೂ ಓದಿ : ಹೊಟ್ಟೆಗೆ ಏನು ತಿನ್ನುತ್ತಿಯಾ : ಕಸ ಎಸೆದವನಿಗೆ ಸಿ.ಟಿ.ರವಿ ತರಾಟೆ

Advertisement

Udayavani is now on Telegram. Click here to join our channel and stay updated with the latest news.

Next