2023-24ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯಧನ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಸಲು ಸಹಾಯಧನ ಸಿಗಲಿದೆ. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿ ರೈತರು ಶೇ.50 ಸಹಾಯಧನ ಪಡೆಯಬಹುದು.
ಸಹಾಯಧನ ಎಷ್ಟೆಷ್ಟು?
3 ಎಚ್.ಪಿ.ಸೋಲಾರ್ ಪಂಪ್‌ಸೆಟ್‌ಗೆ 1 ಲ.ರೂ., 5 ಎಚ್‌ಪಿ ಹಾಗೂ ಹೆಚ್ಚಿನ ಸಾಮರ್ಥ್ಯದ ಪಂಪ್ ಸೆಟ್‌ಗಳಿಗೆ 1.50 ಲಕ್ಷ ರೂ. ಸಹಾಯಧನ ಸಿಗಲಿದೆ.
3 ಎಚ್‌ಪಿಯ ಸೋಲಾರ್ ಪಂಪ್ ಸೆಟ್‌ಗಳಿಗೆ ಘಟಕ ವೆಚ್ಚ 1.98 ಲಕ್ಷ ರೂ.ಗೆ ಶೇ.50ರಂತೆ 0.99 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.
5 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಪಂಪ್‌ಸೆಟ್‌ಗಳಿಗೆ 3 ಲಕ್ಷ ರೂ.ಗಳ ಶೇ.50 ರಂತೆ 1.50 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.
ಸೋಲಾರ್ ಪಂಪ್ ಸೆಟ್‌ಗಳಿಗೆ ವಿಮೆ ಮಾಡಿಸುವುದು ಕಂಪೆನಿಯ ಜವಾಬ್ದಾರಿಯಾಗಿದ್ದು ಅವರಿಂದ ಸೂಕ್ತ ದಾಖಲೆ ಪಡೆಯಲಾಗುತ್ತದೆ.
ಅಧಿಕೃತ ಸಂಸ್ಥೆಯಿಂದ ಮಾತ್ರ ಸೋಲಾರ್ ಪಂಪ್‌ಸೆಟ್ ಖರೀದಿಸಬೇಕು
ಬೇಕಾಗುವ ದಾಖಲೆಗಳು
ಪಹಣಿ
ಆಧಾರ್ ಕಾರ್ಡ್
ಬೆಳೆ ದೃಢೀಕರಣ ಪತ್ರ
ಬ್ಯಾಂಕ್ ಪಾಸ್ ಬುಕ್
ಜಾತಿ-ಆದಾಯ ಪತ್ರ
20 ರೂ.ನ ಬಾಂಡ್ ಪೇಪರ್
ಅರ್ಜಿದಾರರ ಫೋಟೋ
ಎಫ್ಐಡಿ ಸಂಖ್ಯೆ
ಅರ್ಜಿ ಎಲ್ಲಿ ಸಲ್ಲಿಸಬೇಕು?
ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕಿದೆ. ಗುರಿಗೆ ಅನುಗುಣವಾಗಿ ಮಾರ್ಗಸೂಚಿ ಅನುಸಾರ ಫಲಾನುಭವಿಗಳ ಜೇಷ್ಠತಾ ಆಧಾರದ ಮೇಲೆ ಸಹಾಯಧನಕ್ಕೆ ಪರಿಗಣಿಸಲಾಗುತ್ತದೆ.